ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಗೆ ನೆಲಕಚ್ಚಿದ ಅಡಿಕೆ ತೋಟ - Chikmagalore latest news

ಎನ್.ಆರ್ ಪುರ ತಾಲೂಕಿನ ಹಂತುವಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸ್ಗಲ್ ಗ್ರಾಮದಲ್ಲಿ ಕಾಡಾನೆಗಳು ದಾಳಿ‌ ನಡೆಸಿ ಅಡಿಕೆ ಗಿಡಗಳನ್ನು ನೆಲಕ್ಕೆ ಉರುಳಿಸಿವೆ.

Elephant attuck
Elephant attuck

By

Published : Apr 8, 2021, 3:23 PM IST

ಚಿಕ್ಕಮಗಳೂರು:ದಿನದಿಂದ ದಿನಕ್ಕೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿ ಹೋಗುತ್ತಿದೆ. ಪ್ರತಿನಿತ್ಯ ಕಾಡಾನೆಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದು, ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು, ಈ ದಾಳಿಯಿಂದ ಅಡಿಕೆ ತೋಟ ಸಂಪೂರ್ಣ ಹಾನಿಯಾಗಿದೆ.

ಎನ್.ಆರ್ ಪುರ ತಾಲೂಕಿನ ಹಂತುವಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸ್ಗಲ್ ಗ್ರಾಮದಲ್ಲಿ ಕಾಡಾನೆಗಳು ದಾಳಿ‌ ನಡೆಸಿ ಅಡಿಕೆ ಗಿಡಗಳನ್ನು ನೆಲಕ್ಕೆ ಉರುಳಿಸಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕೂಸ್ಗಲ್ ಗ್ರಾಮದ ರೈತ ಪರಮೇಶ್ವರ್ ನಾಯ್ಕ್ ಎಂಬುವರ ಅಡಿಕೆ ತೋಟದ ಮೇಲೆ ಕಾಡನೆಗಳು ದಾಳಿ ನಡೆಸಿವೆ. ಇದರಿಂದ ಹತ್ತಾರು ಅಡಿಕೆ ಮರಗಳಿಗೆ ಹಾನಿಯಾಗಿದೆ.

ಕಾಡಾನೆಗಳ ಹಾವಳಿ ಕುರಿತು ಹಲವಾರು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ರೈತರು ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details