ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಆನೆ ದಾಳಿಗೆ ಮಹಿಳೆ ಬಲಿ: ಗ್ರಾಮಸ್ಥರ ಆಕ್ರೋಶ - ಮಹಿಳೆ ಬಲಿ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆನೆಗಳ ಉಪಟಳಕ್ಕೆ ಇಂದು ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

Elephant attack woman dies
ಆನೆ ದಾಳಿಗೆ ಮಹಿಳೆ ಬಲಿ

By

Published : Nov 20, 2022, 12:31 PM IST

Updated : Nov 20, 2022, 12:57 PM IST

ಚಿಕ್ಕಮಗಳೂರು:ಆನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಎಂಬಲ್ಲಿ ಘಟನೆ ನಡೆದಿದೆ. ಶೋಭಾ ಮೃತರು.

ಇಂದು ಮುಂಜಾನೆ ಹುಲ್ಲು ಕುಯ್ಯಲು ತೆರಳಿದ್ದಾಗ ಆನೆ ದಾಳಿ ನಡೆಸಿದೆ. ಶೋಭಾ ಅವರ ಪತಿ ಸತೀಶ್ ಗೌಡ ಅವರ ಮುಂದೆಯೇ ಘಟನೆ ನಡೆಯಿತು ಎಂದು ತಿಳಿದು ಬಂದಿದೆ. ಈ ಹಿಂದೆ ಕೆಂಜಿಗೆ ಗ್ರಾಮದ ಆನಂದ ದೇವಾಡಿಗ ಎಂಬುವವರು ಕಾಡಾನೆ ತುಳಿತದಿಂದ ಅಸುನೀಗಿದ್ದರು.

ಚಿಕ್ಕಮಗಳೂರಲ್ಲಿ ಆನೆ ದಾಳಿಗೆ ಮಹಿಳೆ ಬಲಿ: ಗ್ರಾಮಸ್ಥರ ಆಕ್ರೋಶ

ಒಂದೆಡೆ ಎಲೆಚುಕ್ಕಿ ಹಳದಿ ಎಲೆ ರೋಗಗಳಿಂದ ಅಡಿಕೆ ತೋಟ ರಕ್ಷಿಸಲಾರದೆ ರೈತರು ಕಂಗೆಟ್ಟಿದ್ದಾರೆ. ಇತ್ತ ಆನೆಗಳು ದಾಳಿ ನಡೆಸಿ ಜನರನ್ನು ಬಲಿ ಪಡೆದುಕೊಳ್ಳುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ವ್ಯರ್ಥವಾಗಿದೆ ಎಂದು ಅರಣ್ಯ ಇಲಾಖೆಯ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾಫಿ ತೋಟದ ಕಾರ್ಮಿಕರನ್ನು ತುಳಿದು ಸಾಯಿಸದ ಒಂಟಿ ಸಲಗ!

Last Updated : Nov 20, 2022, 12:57 PM IST

ABOUT THE AUTHOR

...view details