ಚಿಕ್ಕಮಗಳೂರು :ತೋಟದಲ್ಲಿ ಕೆಲಸ ಮಾಡುವಾಗ ಕಾಡಾನೆ ದಾಳಿ ಮಾಡಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು : ಕಾಡಾನೆ ದಾಳಿ, ಓರ್ವ ಮಹಿಳೆ ಸಾವು - ಚಿಕ್ಕಮಗಳೂರು
ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ಇಬ್ಬರ ಮೇಲೆ ದಾಳಿ ಮಾಡಿದ್ದು, ಓರ್ವ ಮಹಿಳೆ ಮೃತ ಹೊಂದಿದ್ದು, ಇನ್ನೊಬ್ಬನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ..
ಚಿಕ್ಕಮಗಳೂರು: ಕಾಡಾನೆ ದಾಳಿ, ಓರ್ವ ಮಹಿಳೆ ಸಾವು
ಕಾಡಾನೆ ದಾಳಿಯಿಂದ ಸರೋಜ ಬಾಯಿ (45) ಎಂಬುವರು ಸಾವನ್ನಪ್ಪಿದ್ದು, ದುಗ್ಗಪ್ಪ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಕಾಳು ಮೆಣಸು ಕೊಯ್ಯಲು ತೆರಳಿದಾಗ ಈ ದುರಂತ ನಡೆದಿದ್ದು, ಆಲ್ದೂರು ಠಾಣಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಆಟೋ ರಿಕ್ಷಾ ಕದ್ದು ಎಸ್ಕೇಪ್.. ಖತರ್ನಾಕ್ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ