ಶಿಶಿಲಾ ಭಾಗದಲ್ಲಿ ಭೈರನಂತಿರುವ ಒಂಟಿ ಸಲಗ ಪತ್ತೆ ಚಿಕ್ಕಮಗಳೂರು: ಒಂಟಿ ಸಲಗ ಭೈರನ ಬಗ್ಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನರಿಗೆ ಇದೀಗ ಅನುಮಾನ ಕಾಡಲು ಶುರುವಾಗಿದೆ. ಮೊನ್ನೆಯಷ್ಟೇ ಸಿಕ್ಕಿಬಿದ್ದಿದ್ದ ಭೈರ ಇದೀಗ ಮತ್ತೆ ಜನರಿಗೆ ಕಾಣಿಸಿಕೊಂಡಿದ್ದಾನೆ ಎನ್ನಲಾಗ್ತಿದ್ದು. ಇದು ಹೇಗೆ ಸಾಧ್ಯ? ಎಂದು ಜನರಲ್ಲಿ ಪ್ರಶ್ನೆಯೊಂದು ಮೂಡಿದೆ.
ಜಿಲ್ಲೆಯ ಕೆಲ ಜನರನ್ನು ಬಲಿ ಪಡೆದಿದ್ದ ಭೈರ ಯಾರ ಕಣ್ಣಿಗೂ ಕಾಣದೇ ತಪ್ಪಿಸಿಕೊಂಡಿದ್ದ. ಆದರೆ ಮೊನ್ನೆಯಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳ ಸತತ ಪ್ರಯತ್ನದಿಂದ ಕೊನೆಗೂ ಖೆಡ್ಡಾಕ್ಕೆ ಬಿದ್ದಿದ್ದ. ಆದರೆ ಇದೀಗ ಸೆರೆಯಾಗಿದ್ದು ಭೈರನಾ ಅಥವಾ ಬೇರೆ ಆನೆಯಾ? ಎಂಬ ಅನುಮಾನ ಜನರನ್ನು ಬಲವಾಗಿ ಕಾಡುತ್ತಿದೆ.
ಶಿಶಿಲಾ ಭಾಗದಲ್ಲಿ ಒಂಟಿ ಸಲಗವೊಂದು ಕಾಣಸಿಕ್ಕಿದ್ದು, ಅದು ಕೂಡ ಭೈರನಂತೆ ಉದ್ದ ಕೋರೆ ಇರುವ ಕಾಡಾನೆಯಾಗಿದೆ. ಇದು ಅನುಮಾನಗಳಿಗೆ ಪುಷ್ಠಿ ನೀಡಿದಂತಿದೆ. ಹಾಗಿದ್ದರೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಭೈರನಿಗಲ್ಲವೇ? ಅಲ್ಲದೇ ಸರ್ಕಾರ ಮೂರು ಕಾಡಾನೆಗಳ ಸೆರೆಗೆ ಮಾತ್ರ ಅವಕಾಶ ನೀಡಿತ್ತು. ಮೂರು ಕಾಡಾನೆ ಸೆರೆಯಾದ ಮೇಲೂ ಅಧಿಕಾರಿಗಳ ನಿಲ್ಲದ ಕಾರ್ಯಾಚರಣೆ ಜನರಲ್ಲಿ ಶಂಕೆ ಮೂಡಿಸಿದೆ. ಅಲ್ಲದೇ ಈ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಭೈರನ ಕಣ್ಣಾಮುಚ್ಚಾಲೆ, ಉಪಟಳಕ್ಕೆ ಬ್ರೇಕ್: ಕೊನೆಗೂ ಒಂಟಿಸಲಗ ಸೆರೆ