ಚಿಕ್ಕಮಗಳೂರು: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಎರಡು ದಿನಗಳಲ್ಲೇ ಲೋಕಸಭಾ ಚುನಾವಣಾ ಮತದಾನವನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೊದಲ ಮನೆ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದು, ಈಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮತ್ತೆರಡು ಹಳ್ಳಿಗಳಲ್ಲೂ ಬಹಿಷ್ಕಾರ ಮಾಡಲಾಗಿದೆ.
ಚುನಾವಣೆ ಸಮೀಪಿಸ್ತಿದ್ದಂತೆ ಮಲೆನಾಡಲ್ಲಿ ಏರುತ್ತಿದೆ ಚುನಾವಣೆ ಬಹಿಷ್ಕಾರದ ಬಿಸಿ - ಚಿಕ್ಕಮಗಳೂರು
ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೊದಲ ಮನೆ ಗ್ರಾಮಸ್ಥರು, ಕಳಸದ ಬಾಳೆಹೊಳೆ ಗ್ರಾಮದ ಸ್ಥಳೀಯರು ಮತದಾನ ಬಹಿಷ್ಕಾರದ ತಿರ್ಮಾನಕ್ಕೆ ಬಂದಿದ್ದಾರೆ.
ಚುನಾವಣೆ ಬಹಿಷ್ಕಾರದ ಬಿಸಿ
ಹೌದು, ಚುನಾವಣೆ ಸಮೀಪಿಸ್ತಿದ್ದಂತೆ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಬಿಸಿ ಏರುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಕಳಸದ ಬಾಳೆಹೊಳೆ ಗ್ರಾಮದ ಸ್ಥಳೀಯರು ಮತದಾನ ಬಹಿಷ್ಕಾರದ ತಿರ್ಮಾನಕ್ಕೆ ಬಂದಿದ್ದಾರೆ. ಈ ಬಾರಿ ಮತದಾನ ಮಾಡಲ್ಲ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೇ, ಮೂಲಭೂತ ಸೌಕರ್ಯಗಳು ಸರಿಯಾಗಿ ಕಲ್ಪಿಸದ ಹಿನ್ನೆಲೆ ಮತದಾನದಿಂದ ದೂರ ಉಳಿಯುವ ತೀರ್ಮಾನವನ್ನು ಗ್ರಾಮಸ್ಥರು ಮಾಡಿದ್ದು, ಗ್ರಾಮದ ಮುಂಭಾಗ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.