ಕರ್ನಾಟಕ

karnataka

ETV Bharat / state

ದತ್ತ ಪೀಠದಲ್ಲಿ ಮತ್ತೆ ಮಾಂಸಹಾರ ಸೇವನೆ : ಹಿಂದೂ ಮುಖಂಡರ ಗಂಭೀರ ಆರೋಪ - ಈಟಿವಿ ಭಾರತ ಕನ್ನಡ

ದತ್ತ ಪೀಠದಲ್ಲಿ ಮಾಂಸಾಹಾರದ ಅಡುಗೆ ಮಾಡಲಾಗುತ್ತಿದೆ ಇದರ ಬಗ್ಗೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.

Etv Bharateating-non-vegetarian-food-again-in-datta-peetha
Etv Bharatದತ್ತ ಪೀಠದಲ್ಲಿ ಮತ್ತೆ ಮಾಂಸಹಾರ ಸೇವನೆ, ಹಿಂದೂ ಮುಖಂಡರ ಗಂಭೀರ ಆರೋಪ

By

Published : Oct 8, 2022, 6:07 PM IST

Updated : Oct 8, 2022, 7:25 PM IST

ಚಿಕ್ಕಮಗಳೂರು :ಇಲ್ಲಿನ ದತ್ತಪೀಠದ ಹೋಮ ಮಂಟಪದಲ್ಲಿ ಮಾಂಸಾಹಾರ ಅಡುಗೆ ಮಾಡಿ ಸೇವಿಸಲಾಗಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂರ ಧಾರ್ಮಿಕ ಆಚರಣೆ ಜಾಗ ಎಂದು ಘೋಷಿಸಿ ಕೋರ್ಟ್​ ಆದೇಶ ಈ ಹಿಂದೆ ನೀಡಿದೆ. ಹಿಂದೂಗಳಿಗಾಗಿ ಹೋಮ ಮಾಡಲು ಶೆಡ್​ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಬಂದ ಪ್ರವಾಸಿಗರ ಹೋಮಕ್ಕೆ ಮಾಡಿದ್ದ ಜಾಗದಲ್ಲಿ ಮಾಂಸಾಹಾರ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡರು ಆರೋಪ ಮಾಡುತ್ತಿದ್ದಾರೆ.

ರಕ್ಷಣೆಗಾಗಿ ಅಧಿಕಾರಿಗಳನ್ನು ನೇಮಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ದೂರು ನೀಡಿದ ನಂತರ ಕಾಟಾಚಾರಕ್ಕೆ ಹೋಮ ಶಾಲೆಯ ಅಡ್ಡಲಾಗಿ ಯಾರು ಹೋಗದಂತೆ ಕಟ್ಟಲಾಗಿದೆ. ಆದರೆ, ಅಲ್ಲಿ ಮಾಂಸಾಹಾರ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ ಎಂದು ಆರೋಪಿಸಿದ್ದಾರೆ.

ದತ್ತ ಪೀಠದಲ್ಲಿ ಮತ್ತೆ ಮಾಂಸಹಾರ ಸೇವನೆ ಮಾಡಲಾಗಿದೆ ಎಂದು ಹಿಂದೂ ಸಂಘನೆ ಮುಖ್ಯಸ್ಥರು ಆರೋಪಿಸಿದ್ದಾರೆ.

ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಹೀಗೆ ಮುಂದುವರೆಯುತ್ತದೆ. ಪೊಲೀಸರು ಮತ್ತು ಜಿಲ್ಲಾಡಳಿತ ಸರಿಯಾದ ಕ್ರಮಜರುಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೇ ಸರಿಯಾದ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ :ದತ್ತಪೀಠದಲ್ಲಿರುವ ಅನಗತ್ಯ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ : ಸಚಿವ ಸುನೀಲ್ ಕುಮಾರ್

Last Updated : Oct 8, 2022, 7:25 PM IST

ABOUT THE AUTHOR

...view details