ಚಿಕ್ಕಮಗಳೂರು: ಮಲೆನಾಡು ಒಳಭಾಗಗಳಲ್ಲಿ ಹಾಗೂ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹೆನ್ನೆಲೆ ಹೆಬ್ಬಾಳೆ ಸೇತುವೆ ಮುಳುಗಡೆಯ ಹಂತಕ್ಕೆ ತಲುಪಿದೆ. ಕುದುರೆ ಮುಖ ಸುತ್ತಮುತ್ತ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿರುವ ಕಾರಣ, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಹರಿವಿನಲ್ಲಿ ಕ್ಷಣದಿಂದ ಕ್ಷಣಕ್ಕೆ ನೀರಿನ ಹೆಚ್ಚಳ ಕಂಡು ಬರುತ್ತಿದೆ.
ಚಿಕ್ಕಮಗಳೂರಲ್ಲಿ ವರುಣನಾರ್ಭಟ.. ಮುಳುಗಡೆ ಹಂತ ತಲುಪಿದ ಹೆಬ್ಬಾಳೆ ಸೇತುವೆ - ಚಿಕ್ಕಮಗಳೂರಿನ ಮುಳಗಡೆ ಹಂತ ತಲುಪಿದ ಹೆಬ್ಬಾಳೆ ಸೇತುವೆ
ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಹೆಬ್ಬಾಳ ಸೇತುವೆ ಮುಳುಗಡೆ ಹಂತ ತಲುಪಿದೆ.
ಮುಳುಗಡೆ ಹಂತ ತಲುಪಿದ ಹೆಬ್ಬಾಳೆ ಸೇತುವೆ
ಸೇತುವೆ ಮುಳುಗಡೆಯಾಗಲು ಕೇವಲ ಮೂರು ಅಡಿ ಮಾತ್ರ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಮೊದಲು ಮುಳುಗಡೆಯಾಗುವ ಸೇತುವೆ ಹೆಬ್ಬಾಳೆ ಸೇತುವೆ. ಮೂಡಿಗೆರೆ ತಾಲೂಕಿನಲ್ಲಿ ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದ್ದ, ಒಂದು ವೇಳೆ ಸೇತುವೆ ಮುಳುಗಿದ್ದೆ ಆದಲ್ಲಿ ಹೊರನಾಡು ಕಳಸ ಸಂಪರ್ಕ ಕಡಿತಗೊಳ್ಳಲಿದ್ದು, ಈ ಭಾಗದ ಸಾವಿರಾರು ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ.
ಇದನ್ನೂ ಓದಿ:ಮಾನ್ಸೂನ್ ಟಿಪ್ಸ್: ಮನೆಯಲ್ಲೇ ಹರ್ಬಲ್ ಟೀ ತಯಾರಿಸಿ.. ಆರೋಗ್ಯದಿಂದಿರಿ
TAGGED:
hebbale bridge drowing news