ಚಿಕ್ಕಮಗಳೂರು:ಸಾರಿಗೆ ನೌಕರರು ಯಾರ ರಾಜಕೀಯ ದಾಳ ಆಗಬೇಡಿ, ಮೇ 2ರ ವರೆಗೆ ಸರ್ಕಾರಕ್ಕೆ ಅವಕಾಶ ನೀಡಿ, ನಿಮ್ಮ ಬೇಡಿಕೆ ಈಡೇರದಿದ್ದರೆ ನಾವು ಧ್ವನಿ ಎತ್ತುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನೀವು ಯಾರ ರಾಜಕೀಯ ದಾಳ ಆಗಬೇಡಿ: ಸಾರಿಗೆ ನೌಕರರಿಗೆ ಸಿಟಿ ರವಿ ಕಿವಿ ಮಾತು - ರಾಜಕೀಯ ದಾಳ ಆಗಬೇಡಿ
ನೀವು ಯಾರ ರಾಜಕೀಯ ದಾಳ ಆಗಬೇಡಿ ಮೇ 2ರ ವರೆಗೆ ಸರ್ಕಾರಕ್ಕೆ ಅವಕಾಶ ನೀಡಿ, ಕೋವಿಡ್ ಕಾಲದ ಪರಿಸ್ಥಿತಿ ಅವಲೋಕಿಸಬೇಕು ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ಆಗ್ತಿಲ್ಲ ಎಂದು ಹೇಳಿದರು.
![ನೀವು ಯಾರ ರಾಜಕೀಯ ದಾಳ ಆಗಬೇಡಿ: ಸಾರಿಗೆ ನೌಕರರಿಗೆ ಸಿಟಿ ರವಿ ಕಿವಿ ಮಾತು ಸಿಟಿ ರವಿ ಕಿವಿ ಮಾತು](https://etvbharatimages.akamaized.net/etvbharat/prod-images/768-512-11326762-thumbnail-3x2-fhjkgh.jpg)
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಯಾರ ರಾಜಕೀಯ ದಾಳ ಆಗಬೇಡಿ ಮೇ 2ರ ವರೆಗೆ ಸರ್ಕಾರಕ್ಕೆ ಅವಕಾಶ ನೀಡಿ, ಕೋವಿಡ್ ಕಾಲದ ಪರಿಸ್ಥಿತಿ ಅವಲೋಕಿಸಬೇಕು ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ಆಗ್ತಿಲ್ಲ ಎಂದು ಹೇಳಿದರು.
ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರ ಲೆಕ್ಕದಲ್ಲಿ ಜಾತಿ ಒಡೆಯುವುದು, ಕೊಲೆ, ಕಗ್ಗೊಲೆಯೇ ಆಡಳಿತ ಅನ್ಸುತ್ತೆ. ಸಿದ್ದರಾಮಯ್ಯ ಅವರಂತ ಕೆಟ್ಟ ಆಡಳಿತದ ಪರಿಸ್ಥಿತಿ ಇನ್ನೆಂದು ಬರಬಾರದು. ಅವರ ಕಾಲದಲ್ಲಿ 46 ಜನರ ಹತ್ಯೆಯಾಯ್ತು, ಅಂತಹ ಆಡಳಿತ ಕನಸು ಮನಸ್ಸಿನಲ್ಲಿಯೂ ಬೇಡ ಎಂದರು.