ಕರ್ನಾಟಕ

karnataka

ETV Bharat / state

ನಾಡಿಗೆ ಬಂದ ಜಿಂಕೆಯನ್ನು ಬೆನ್ನಟ್ಟಿ ಕೊಂದ ನಾಯಿಗಳು... ವಿಡಿಯೋ ವೈರಲ್​​ - ಜಿಂಕೆ ಕೊಂದ ನಾಯಿಗಳು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿ ಕೊಂದಿವೆ.

dogs fights with deer in chikmagalore
ಜಿಂಕೆ ಮೇಲೆ ನಾಯಿಗಳ ದಾಳಿ

By

Published : Feb 23, 2021, 2:37 PM IST

ಚಿಕ್ಕಮಗಳೂರು: ಕಾಡಿನಿಂದ ನಾಡಿಗೆ ಬಂದ ಜಿಂಕೆ ಮೇಲೆ ನಾಯಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಂಕೆ ಮೇಲೆ ನಾಯಿಗಳ ದಾಳಿ

ನಾಯಿಗಳ ದಾಳಿ‌ಯಿಂದ ಗಾಯಗೊಂಡು ಜಿಂಕೆ ಸಾವನ್ನಪ್ಪಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜಿಂಕೆಯನ್ನು ಕಂಡ ನಾಯಿಗಳ ಹಿಂಡು ಅಟ್ಟಿಸಿಕೊಂಡು ಬಂದಿದ್ದು ಉಗ್ಗೆಹಳ್ಳಿಯ ಗ್ರಾಮಕ್ಕೆ ಬಂದ ಜಿಂಕೆ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ. ಜಿಂಕೆಯನ್ನು ಕಂಡ ಉಗ್ಗೆಹಳ್ಳಿ‌‌ ಗ್ರಾಮದ ಶಿವಕುಮಾರ್ ಎಂಬುವವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಮೂಡಿಗೆರೆಯ ಅರಣ್ಯ ಸಿಬ್ಬಂದಿ, ಪ್ರಾಥಮಿಕ ಚಿಕಿತ್ಸೆ ನೀಡುವ ಮೊದಲೇ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅರಣ್ಯ ಇಲಾಖೆ ಅಂತ್ಯ ಸಂಸ್ಕಾರ ನೆರವೇರಿಸಲಿದೆ.

ಇದನ್ನೂ ಓದಿ:ಜಿಲೆಟಿನ್ ಸ್ಫೋಟದಲ್ಲಿ 6 ಜನರ ದೇಹ ಛಿದ್ರ ಛಿದ್ರ: ಮೃತರ ಗುರುತು ಪತ್ತೆ

ABOUT THE AUTHOR

...view details