ಚಿಕ್ಕಮಗಳೂರು:ಕೊರೊನಾ ಸೋಂಕಿತ ವೈದ್ಯರ ವೈದ್ಯಕೀಯ ವರದಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ವೈದ್ಯನ ಪಾಸಿಟಿವ್ ಪ್ರಕರಣ ದಿನಕ್ಕೆ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಾ ಸಾಗುತ್ತಿದೆ.
ಮೂರೇ ದಿನದಲ್ಲಿ ವೈದ್ಯನ ಕೊರೊನಾ ರಿಪೋರ್ಟ್ ನೆಗೆಟಿವ್: ಜನರಲ್ಲಿ ಅನುಮಾನ - ಹಾಸನ ಸುದ್ದಿ
ಮೂಡಿಗೆರೆ ತಾಲೂಕಿನಲ್ಲಿ ವೈದ್ಯನಿಗೆ ಬಂದಿರುವ ಕೊರೊನಾ ಪಾಸಿಟಿವ್ ಪ್ರಕರಣ ಜನರಲ್ಲಿ ಗೊಂದಲ ಮೂಡಿಸುತ್ತಿದೆ.
![ಮೂರೇ ದಿನದಲ್ಲಿ ವೈದ್ಯನ ಕೊರೊನಾ ರಿಪೋರ್ಟ್ ನೆಗೆಟಿವ್: ಜನರಲ್ಲಿ ಅನುಮಾನ corona in hassan](https://etvbharatimages.akamaized.net/etvbharat/prod-images/768-512-7306353-545-7306353-1590148874257.jpg)
ವೈದ್ಯರ ಕೊರೊನಾ ರಿಪೋರ್ಟ್
ವೈದ್ಯರಿಗೆ ಕೊರೊನಾ ಕಾಣಿಸಿಕೊಂಡ ಮೂರೇ ದಿನಕ್ಕೆ ಅವರ ವರದಿ ನೆಗೆಟಿವ್ ಎಂದು ಬಂದಿದೆ. ಇದು ಜನರ ಅನುಮಾನಕ್ಕೆ ಕಾರಣವಾದ ಅಂಶ. ಹಾಸನ ಲ್ಯಾಬ್‌ನಿಂದ ಬಂದ ಈ ರಿಪೋರ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹಾಗಾಗಿ ಈ ವೈದ್ಯರ ಪ್ರಕರಣದಲ್ಲಿ ನಡೆಯುತ್ತಿರುವುದೇನು? ಎಂದು ಜಿಲ್ಲೆಯಲ್ಲಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ 850ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇದರ ನಡುವೆ ಸೋಂಕಿತ ವೈದ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮೌನವಹಿಸಿದ್ದಾರೆ.
Last Updated : May 22, 2020, 9:07 PM IST