ಚಿಕ್ಕಮಗಳೂರು :ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.
ಈ ವೇಳೆ ದೇವರ ಬಳಿ ಮಗಳ ಮದುವೆಯ ಆಹ್ವಾನ ಪತ್ರಿಕೆಯಿಟ್ಟು ಪೂಜೆ ನೆರವೇರಿಸಿ, ದೇವಿಯ ದರ್ಶನ ಬಳಿಕ ಶ್ರೀಗಳ ಆಶೀರ್ವಾದ ಪಡೆದರು. ನಂತರ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿಯವರ ಆಶ್ರಮಕ್ಕೆ ಡಿಕೆಶಿ ಭೇಟಿ ನೀಡಿ, ಮಗಳ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಶೃಂಗೇರಿ ಶಾರದಾಪೀಠಕ್ಕೆ ಡಿಕೆಶಿ ಭೇಟಿ ಈ ವೇಳೆ ಮಾತನಾಡಿದ ಅವಧೂತ ವಿನಯ್ ಗುರೂಜಿ ಅವರು, ಡಿಕೆಶಿ ಅವರ ಮಗಳ ಮದುವೆ ವ್ಯಾಲಂಟೈನ್ ಡೇ ದಿನದಂದೇ ಆಗಲೆಂದು ತಮಾಷೆ ಮಾಡಿದ್ದೆ. ಈಗ ಅದೇ ವ್ಯಾಲಂಟೈನ್ ಡೇ ದಿನ ಮದುವೆಯಾಗುತ್ತಿದೆ. ಡಿ ಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆಗೆ ಕರೆಯಲು ನಮ್ಮ ಆಶ್ರಮಕ್ಕೆ ಬಂದಿದ್ದರು.
ನನಗೆ ಎರಡು ಕುಟುಂಬದ ಜೊತೆಯೂ ನಿಕಟ ಸಂಪರ್ಕವಿದೆ. ಅವರ ಮದುವೆ ಆಶ್ರಮದ ಮದುವೆ ಇದ್ದಂತೆ. ಭವಿಷ್ಯದಲ್ಲಿ ಐಶ್ವರ್ಯ ಮತ್ತು ಅಮಾರ್ಥ್ಯ ತುಂಬಾ ಚೆನ್ನಾಗಿ ಇರ್ತಾರೆ. ಸಿದ್ದಾರ್ಥ್ ಅವರು ಎಲ್ಲೆ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅವರು ಮಕ್ಕಳ ಮದುವೆ ಕಂಡು ಅಲ್ಲಿಂದಲೇ ಖುಷಿ ಪಡುತ್ತಾರೆ ಎಂದರು.