ಚಿಕ್ಕಮಗಳೂರು:ಜಿಲ್ಲಾ ಉತ್ಸವದ ಅಂಗವಾಗಿ ನಗರದ ಬೋಳು ರಾಮೇಶ್ವರ ದೇವಾಲಯದ ರಸ್ತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಹಾರ ಮೇಳ ಆಯೋಜನೆ ಮಾಡಲಾಗಿದೆ.
ಕಾಫಿನಾಡಿನ ಜಿಲ್ಲಾ ಉತ್ಸವದಲ್ಲಿ ಆಹಾರ ಮೇಳ ಆಯೋಜನೆ - ಪಾನಿಪುರಿ, ಸಿರಿ ಧಾನ್ಯಗಳಿಂದ ತಯಾರಾದ ಚಕ್ಕುಲಿ
ಜಿಲ್ಲಾ ಉತ್ಸವದ ಅಂಗವಾಗಿ ನಗರದ ಬೋಳು ರಾಮೇಶ್ವರ ದೇವಾಲಯದ ರಸ್ತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಹಾರ ಮೇಳ ಆಯೋಜನೆ ಮಾಡಲಾಗಿದೆ.
ನಗರದ ಪ್ರವಾಸಿ ಮಂದಿರದ ರಸ್ತೆಯಿಂದ ಬೋಳು ರಾಮೇಶ್ವರ ದೇವಸ್ಥಾನದವರೆಗೂ ಆಹಾರ ಮೇಳದ ಸ್ಟಾಲ್ಗಳನ್ನು ಹಾಕಲಾಗಿದ್ದು, ಸಸ್ಯಹಾರಿಗಳಿಗೆ ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಿರೋದು ವಿಶೇಷವಾಗಿದೆ. ಈ ಆಹಾರ ಮೇಳದಲ್ಲಿ 140ಕ್ಕೂ ಹೆಚ್ಚು ಆಹಾರ ಮಳಿಗೆಗಳಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದ ವಿಶೇಷ ಬಗೆ ಬಗೆಯ ಖಾದ್ಯಗಳು, ಆಹಾರ ಪದಾರ್ಥಗಳ ಮಳಿಗೆಗಳನ್ನು ಇಲ್ಲಿ ನೋಡಬಹುದಾಗಿದೆ.
ವಿಶೇಷವಾಗಿ ಪಾನಿಪುರಿ, ಸಿರಿಧಾನ್ಯಗಳಿಂದ ತಯಾರಾದ ಚಕ್ಕುಲಿ, ಅಕ್ಕಿ ರೊಟ್ಟಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕೇರಳದ ವಿಶೇಷ ಹಲ್ವಾ ಸೇರಿದಂತೆ ಬಗೆ ಬಗೆಯ ಆಹಾರ ಪದಾರ್ಥಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಇನ್ನೊಂದು ಭಾಗದಲ್ಲಿ ಮಾಂಸಾಹಾರಿ ಆಹಾರ ಸ್ಟಾಲ್ಗಳ ಕೂಡ ಇಡಲಾಗಿದ್ದು, ಅಲ್ಲಿಯೂ ಕೂಡ ಸಾರ್ವಜನಿಕರು ಅದರ ರುಚಿಯನ್ನು ಸವಿಯುತ್ತಿದ್ದಾರೆ.