ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಹಲವು ಕ್ರೀಡೆಗಳ ಆಯೋಜನೆ: ಸಿ. ನಂಜಯ್ಯ - ಜಿಲ್ಲೆಯ ಕ್ರೀಡಾ ಇಲಾಖೆಯ ಅಧಿಕಾರಿಗಳು

ಇದೇ ತಿಂಗಳು 28 ರಿಂದ 1 ರ ವರೆಗೆ ಜಿಲ್ಲೆಯಲ್ಲಿ 'ಜಿಲ್ಲಾ ಉತ್ಸವ' ನಡೆಯಲಿದ್ದು, ಈ ಉತ್ಸವದಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಡಿಡಿಪಿಐ ಸಿ. ನಂಜಯ್ಯ ತಿಳಿಸಿದ್ದಾರೆ.

district-festival-in-chikmagalore
ಜಿಲ್ಲಾ ಕ್ರೀಡಾ ಉತ್ಸವ ಕ್ರೀಡಾ ಉಪ ಸಮಿತಿ ಪತ್ರಿಕಾಗೋಷ್ಟಿ

By

Published : Feb 13, 2020, 6:11 PM IST

ಚಿಕ್ಕಮಗಳೂರು:ಇದೇ ತಿಂಗಳು 28 ರಿಂದ 1 ರ ವರೆಗೆ ಜಿಲ್ಲೆಯಲ್ಲಿ 'ಜಿಲ್ಲಾ ಉತ್ಸವ' ನಡೆಯಲಿದ್ದು, ಈ ಉತ್ಸವದಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಡಿಡಿಪಿಐ ಸಿ. ನಂಜಯ್ಯ ತಿಳಿಸಿದ್ದಾರೆ.

ಸಿ. ನಂಜಯ್ಯ

ಜಿಲ್ಲಾ ಕ್ರೀಡಾ ಉತ್ಸವ ಕ್ರೀಡಾ ಉಪ ಸಮಿತಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯು ಮಲೆನಾಡು ಹಾಗೂ ಬಯಲು ಸೀಮೆ ಹೊಂದಿರುವಂತಹ ವಿಶಿಷ್ಟ ಪ್ರದೇಶವಾಗಿದ್ದು, ವಿಶಿಷ್ಟ ಜನಪದ ಕಲೆಗಳು ಹಾಗೂ ಕ್ರೀಡೆಗಳು ಹಾಸು ಹೊಕ್ಕಾಗಿವೆ. ಜಿಲ್ಲೆಯಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಹಾಗೂ ಪೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಉತ್ಸವದಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಪ್ರಮುಖವಾಗಿ ಗಾಳಿ ಪಟ ಸ್ವರ್ಧೆ, ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಕೆಸರು ಗದ್ದೆಓಟ, ನಿಧಿ ಹುಡುಕಾಟ, ಚದುರಂಗ ಸ್ವರ್ಧೆ, ರಾಜ್ಯ ಯೋಗ ಸ್ವರ್ಧೆ, ಜಿಲ್ಲಾ ಟೆಕ್ವಾಂಡೋ ಸ್ವರ್ಧೆ, ಜಿಲ್ಲಾ ಕಬ್ಬಡಿ, ವಾಲಿಬಾಲ್ ಪಂದ್ಯಾವಳಿ, ಜಂಗಿ ಕುಸ್ತಿ, ಗ್ರಾಮೀಣಾ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದ್ದು, ಮೂರು ದಿನಗಳ ಕಾಲ ಜಿಲ್ಲಾ ಉತ್ಸವದಲ್ಲಿ ಈ ಕ್ರೀಡೆಗಳು ನಡೆಯಲಿದೆ. ಜಿಲ್ಲೆಯ ಪ್ರತಿಯೊಬ್ಬ ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸಿ ಜಿಲ್ಲಾ ಉತ್ಸವವನ್ನು ಯಶಸ್ಸಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

ABOUT THE AUTHOR

...view details