ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಇದು ಸತ್ಯಕ್ಕೆ ದೂರವಾದ ವಿಷಯ. ನಾನು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿಲ್ಲ: ಸ್ಪಷ್ಟೀಕರಣ ನೀಡಿದ ಡಿಸಿ - District collector slapped
ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಪುನರ್ವಸತಿ ಪ್ರಗತಿ ಪರಿಶೀಲಿಸುವ ಸಂದರ್ಭ
ಕಳೆದ ಆಗಸ್ಟ್ನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗಳ ಪುನರ್ವಸತಿ ಪ್ರಗತಿ ಪರಿಶೀಲಿಸುವ ಸಂದರ್ಭದಲ್ಲಿ ಪರಿಹಾರ ಹಣ ನಿರೀಕ್ಷಕ ಹಾಗೂ ಪಿಡಿಒ ಅವರ ಬಳಿ ವಿವರ ಕೇಳಿದ್ದೇನೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದೇನೆ. ಆದರೆ, ಅವರ ಮೇಲೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕಂದಾಯ ನಿರೀಕ್ಷಕರು ಸಹ ತಮ್ಮ ಮೇಲೆ ಕಪಾಳ ಮೋಕ್ಷ ಅಥವಾ ಹಲ್ಲೆ ನಡೆಸಿಲ್ಲ ಎಂದೂ ತಿಳಿಸಿದ್ದಾರೆ.