ಚಿಕ್ಕಮಗಳೂರು:ಶಿವರಾತ್ರಿ ಹಬ್ಬಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳದ ಕಡೆಗೆ ಹೊರಟಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಪಾದಚಾರಿಗಳ ದಂಡು ಧರ್ಮಸ್ಥಳದ ಕಡೆ ಹರಿದು ಹೋಗುತ್ತಿದೆ.
ಶಿವರಾತ್ರಿ ಹಬ್ಬಕ್ಕೆ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೊರಟ ಸಾವಿರಾರು ಭಕ್ತರು
ಪ್ರತಿ ವರ್ಷ ಶಿವರಾತ್ರಿ ಹಬ್ಬಕ್ಕೆ ಕಾಲ್ನಡಿಗೆಯಲ್ಲಿ ಸಾವಿರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ನಡೆಸೋದು ಸರ್ವೆ ಸಾಮಾನ್ಯ. ಅದರಲ್ಲಿಯೂ ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯ ಮುಖಾಂತರವೇ ಸಾವಿರಾರೂ ಭಕ್ತರು ಪಾದಯಾತ್ರೆಯಲ್ಲಿ ಸಾಗಿ ಸಣ್ಣ ಸಣ್ಣ ಜಾಗದಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ.
ಪ್ರತಿ ವರ್ಷ ಶಿವರಾತ್ರಿ ಹಬ್ಬಕ್ಕೆ ಕಾಲ್ನಡಿಗೆಯಲ್ಲಿ ಭಕ್ತರು ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ನಡೆಸೋದು ಸರ್ವೆ ಸಾಮಾನ್ಯ. ಅದರಲ್ಲಿಯೂ ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯ ಮುಖಾಂತರ ಸಾವಿರಾರೂ ಭಕ್ತರು ಪಾದಯಾತ್ರೆಯಲ್ಲಿ ಸಾಗಿ ಸಣ್ಣ ಸಣ್ಣ ಜಾಗಗಳಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ.
ಈ ಬಾರಿ ಪಾದಯಾತ್ರಿಗಳು ಮಲಗುವುದಕ್ಕೆ ಸರಿಯಾದ ಸ್ಥಳ ಸಿಗದೇ ಕೊಟ್ಟಿಗೆಯಾರದ ಬಸ್ ನಿಲ್ಡಾಣವನ್ನು ರಾತ್ರಿಯ ಆಸರೆಯ ತಾಣವಾಗಿ ಮಾಡಿಕೊಂಡು, ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜ್ಯದ ನಾನಾ ಕಡೆಯಿಂದ 15 ಸಾವಿರಕ್ಕಿಂತಲೂ ಹೆಚ್ಚು ಪಾದಯಾತ್ರಿಗಳು ಚಿಕ್ಕಮಗಳೂರು ಜಿಲ್ಲೆಯ ಮುಖಾಂತರ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆಂದು ತಿಳಿದು ಬಂದಿದೆ.