ಚಿಕ್ಕಮಗಳೂರು:ಪೊಲೀಸರಿಗೆ ಸವಾಲು ಹಾಕಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪದಲ್ಲಿ ಈತನನ್ನು ಬಂಧಿಸಿದ್ದು, ನಾನೇ ರಾಜ, ನನ್ನ ಗೆಲ್ಲೋರು ಯಾರಿಲ್ಲ, ನನಗೆ ನಾನೇ ರಾಜ, ನಿಮಗೆ ತಾಕತ್ತು ಇದ್ದರೆ ನನ್ನ ಹಿಡಿಯಿರಿ, ಎಂದು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಪೊಲೀಸರಿಗೆ ಸವಾಲು ಹಾಕಿ ನಾಪತ್ತೆಯಾಗಿದ್ದನು.
ಪೊಲೀಸರಿಗೆ ಸವಾಲು ಹಾಕಿ ನಾಪತ್ತೆಯಾಗಿದ್ದ ವ್ಯಕ್ತಿ ಬಂಧನ - Challenge to police in Whatsapp
ನಾನೇ ರಾಜ, ನನ್ನ ಗೆಲ್ಲೋರು ಯಾರಿಲ್ಲ, ನನಗೆ ನಾನೇ ರಾಜ, ನಿಮಗೆ ತಾಕತ್ತು ಇದ್ದರೆ ನನ್ನ ಹಿಡಿಯಿರಿ, ಎಂದು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಪೊಲೀಸರಿಗೆ ಸವಾಲು ಹಾಕಿ ತಲೆಮರೆಸಿಕೊಂಡಿದ್ದ ಆರೋಪಿ ಈಗ ಪೊಲೀಸರು ಅತಿಥಿಯಾಗಿದ್ದಾನೆ.
![ಪೊಲೀಸರಿಗೆ ಸವಾಲು ಹಾಕಿ ನಾಪತ್ತೆಯಾಗಿದ್ದ ವ್ಯಕ್ತಿ ಬಂಧನ detention-of-a-person-who-is-obsconded-by-challenging-police](https://etvbharatimages.akamaized.net/etvbharat/prod-images/768-512-15425333-thumbnail-3x2-arrest.jpg)
ಪೊಲೀಸರಿಗೆ ಸವಾಲು ಹಾಕಿ ನಾಪತ್ತೆಯಾಗಿದ್ದ ವ್ಯಕ್ತಿಯ ಬಂಧನ
ಚಿಕ್ಕಮಗಳೂರು ಜಿಲ್ಲೆಯ, ಎನ್. ಆರ್.ಪುರ ತಾಲೂಕು ಕಚೇರಿ ಸಿಬ್ಬಂದಿ ಅಣ್ಣಪ್ಪ ಪೊಲೀಸರಿಗೆ ಈ ಸವಾಲು ಹಾಕಿದ್ದು, ಟವರ್ ಲೊಕೇಶನ್ ಆಧಾರದ ಮೇಲೆ ಬಾಳೆಕೊಪ್ಪದಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ತಾಲೂಕು ಆಫೀಸ್ನಲ್ಲಿ ಸುಳ್ಳು ದಾಖಲೆ ಸೃಷ್ಟಿಸುತ್ತಿದ್ದ ಎಂಬ ಆರೋಪ ಈ ವ್ಯಕ್ತಿಯ ಮೇಲೆ ಕೇಳಿ ಬಂದಿತ್ತು. ಈ ಹಿನ್ನಲೆ ಎನ್.ಆರ್ ಪುರ ಪೊಲೀರು ಆರೋಪಿಯನ್ನು ಬಂಧಿಸಿ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ರೈತ ಮುಖಂಡರ ಮೇಲೆ ಮಸಿ ಬಳಿದ ಪ್ರಕರಣ : ಮೂವರನ್ನು ವಶಕ್ಕೆ ಪಡೆದ ಪೊಲೀಸರು