ಚಿಕ್ಕಮಗಳೂರು:ಸುಟ್ಟ ಸ್ಥಿತಿಯಲ್ಲಿ ವೃದ್ಧನ ಶವವೊಂದು ಪತ್ತೆಯಾದ ಘಟನೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ... ಕೊಲೆ ಶಂಕೆ - ಅಪರಿಚಿತ ಶವ ಪತ್ತೆ
ಚಿಕ್ಕಮಗಳೂರಿನಲ್ಲಿ ವೃದ್ಧನ ಶವವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರು ಯಾರೆಂಬುದು ತಿಳಿದು ಬಂದಿಲ್ಲ.
ಅಪರಿಚಿತ ಶವ
ಸುಮಾರು 60 ವರ್ಷದ ವ್ಯಕ್ತಿಯ ಮೃತ ದೇಹ ಸುಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವೃದ್ಧನನ್ನು ದುಷ್ಕರ್ಮಿಗಳು ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತ ದೇಹ ಬಹುತೇಕ ಸುಟ್ಟು ಕರಕಲಾಗಿದ್ದು, ಮೂಡಿಗೆರೆ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.