ಚಿಕ್ಕಮಗಳೂರು: ಇಲ್ಲೂ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ನಗರದ ಆಶ್ರಯ ಆಸ್ಪತ್ರೆಯಲ್ಲಿ ಆಕ್ಸಿಜನ್ಗಾಗಿ ಪರದಾಟ ನಡೆಸಲಾಗುತ್ತಿದೆ.
ಆಕ್ಸಿಜನ್ ಮೂಲಕ 27 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ 5 ಗಂಟೆ ವೇಳೆಗೆ ಆಕ್ಸಿಜನ್ ಬರುವ ಸಾಧ್ಯತೆ ಇದೆ. ಆಕ್ಸಿಜನ್ಗಾಗಿ ಜಿಲ್ಲಾಸ್ಪತ್ರೆಗೆ ಆಶ್ರಯ ಆಸ್ಪತ್ರೆ ವೈದ್ಯ ವಿಜಯಕುಮಾರ್ ಬೇಡಿಕೆ ಇಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ನೀಡಲು ಜಿಲ್ಲಾಸ್ಪತ್ರೆಯಲ್ಲೂ ಕೊರತೆ ಎದುರಾಗಿದ್ದು, ಸಾಧ್ಯವಾದರೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.