ಚಿಕ್ಕಮಗಳೂರು:ಈ ಬಾರಿ ಮಳೆಯ ರೌದ್ರ ನರ್ತನಕ್ಕೆ ಜಿಲ್ಲೆಯ ರೈತರು ಅಕ್ಷರಶಹ ನಲುಗಿದ್ದಾರೆ. ನೆರೆ ಪರಿಹಾರ ವಿಳಂಬ ಆಗುತ್ತಿರುವ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗಳಿಂದ ನೊಂದ ಸಂತ್ರಸ್ತ ರೈತರ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ
ನೆರೆ ಪರಿಹಾರ ವಿಳಂಬ ಆಗುತ್ತಿರುವ ಹಿನ್ನೆಲೆ, ಮಲೆನಾಡಿನಲ್ಲಿ ಸಂತ್ರಸ್ತ ರೈತರ ಆತ್ಮಹತ್ಯೆ ಮುಂದುವರೆದಿದೆ.
ನೆರೆ ಪರಿಹಾರ ವಿಳಂಬ: ಮುಂದುವರೆದ ರೈತರ ಆತ್ಮಹತ್ಯೆ!
ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್.ಕೆ. ಮೇಗಲ್ ಗ್ರಾಮದ ವಿಷ ಸೇವಿಸಿ ಚಂದ್ರೇಗೌಡ(55) ಎಂಬ ರೈತ ಸಾವಿಗೆ ಶರಣಾಗಿದ್ದಾನೆ. ಮಳೆಯಿಂದ ಈ ರೈತನ ಒಂದು ಎಕರೆ ಗದ್ದೆ ಕೊಚ್ಚಿಕೊಂಡು ಹೋಗಿದ್ದು, ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ಕೈ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗ್ತಿದೆ.
ಸರ್ಕಾರದಿಂದ ಇನ್ನೂ ಪರಿಹಾರ ಸಿಗದ ಕಾರಣ, ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.