ನೀರು ಕುಡಿಯಲು ಬಂದ ಗರ್ಭಿಣಿ ಜಿಂಕೆ ನಾಯಿಗಳ ದಾಳಿಗೆ ಬಲಿ - undefined
ನೀರು ಕುಡಿಯಲು ಬಂದಿದ್ದ ಜಿಂಕೆ ಮೇಲೆ ನಾಯಿಗಳು ದಾಳಿ ಮಾಡಿದ್ದು, ಗ್ರಾಮಸ್ಥರು ನಾಯಿಗಳಿಂದಾ ಜಿಂಕೆಯನ್ನು ಬಿಡಿಸಿದರು, ಗಂಭೀರ ಗಾಯಗಳಾಗಿದ್ದ ಜಿಂಕೆಯನ್ನು ಬದುಕಿಸಲು ಸಾಧ್ಯವಾಗಿಲ್ಲ.
![ನೀರು ಕುಡಿಯಲು ಬಂದ ಗರ್ಭಿಣಿ ಜಿಂಕೆ ನಾಯಿಗಳ ದಾಳಿಗೆ ಬಲಿ](https://etvbharatimages.akamaized.net/etvbharat/prod-images/768-512-3207792-thumbnail-3x2-ckmjpg.jpg)
ಚಿಕ್ಕಮಗಳೂರು: ಕಾಡಿನಿಂದಾ ನಾಡಿಗೆ ನೀರು ಕುಡಿಯಲು ಬಂದಿದ್ದ ಜಿಂಕೆ ಮೇಲೆ ಗ್ರಾಮದ ನಾಯಿಗಳು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ ಜಿಂಕೆ ಸಾವನಪ್ಪಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದಲ್ಲಿ ನಡೆದಿದೆ.
ದಾಳಿ ಮಾಡುವ ವೇಳೆ ಗ್ರಾಮಸ್ಥರು ನಾಯಿಗಳಿಂದಾ ಜಿಂಕೆಯನ್ನು ಬಿಡಿಸುವ ಪ್ರಯತ್ನ ಮಾಡಿ ನಾಯಿಗಳು ಬೆದರಿಸಿ ಕಳುಹಿಸಿದ್ದರು ನಂತರ ಜಿಂಕೆಯನ್ನು ರಕ್ಷಿಸಿ ನೀರನ್ನು ಕುಡಿಯಿಸಿ ಹಾರೈಕೆ ಸಹ ಮಾಡಿದ್ದರು. ನಂತರ ಅರಣ್ಯ ಇಲಾಖೆಯ ಗಮನಕ್ಕೆ ತಂದು ಗಾಯಾಳು ಜಿಂಕೆಯನ್ನು ಸಿಬ್ಬಂದಿಗೆ ಒಪ್ಪಿಸಿದ್ದಾರೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ಜಿಂಕೆಗೆ ಚಿಕಿತ್ಸೆ ನೀಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಜಿಂಕೆ ಸಾವನಪ್ಪಿದ್ದು ತರೀಕೆರೆಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.