ಚಿಕ್ಕಮಗಳೂರು: ಪ್ರಧಾನಿ ಮೋದಿ ಅವರು ಕರೆ ನೀಡಿರುವ ಎರಡನೇ ಹಂತದ ಲಾಕ್ಡೌನ್ ನಿರ್ವಹಣೆ ಮಾಡಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿದ್ರು.
ಪೊಲೀಸರ ಹೊರೆ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆಗೆ ನಿರ್ಧಾರ ಮಾಡುತ್ತೇವೆ: ಸಚಿವ ಸಿ.ಟಿ.ರವಿ - Minister CT Ravi
ಪೊಲೀಸರಿಗೆ ಕೊರೊನಾ ವೈರಸ್ ತಡೆಯಲು ನಿಯೋಜಿಸಿರುವ ಕೆಲಸದಿಂದ ಹೆಚ್ಚಿನ ಹೊರೆ ಬಿದ್ದಿದೆ. ಟಾಸ್ಕ್ ಫೋರ್ಸ್ ನಿರ್ಮಿಸಿ ಅವರ ಹೊರೆ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ಮುಖಂಡರು ಸಹಕಾರ ನೀಡಲು ಒಪ್ಪಿದ್ದಾರೆ. ಜಿಲ್ಲಾಡಳಿತ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಜಿಲ್ಲೆಯ ಜನರು ಉತ್ತಮ ಸಹಕಾರ ನೀಡುತ್ತಿದ್ದು, ಅದೇ ಕಾರಣಕ್ಕೆ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪ್ರಾಥಮಿಕ ತೊಂದರೆ ಬಂದರೆ ಜಿಲ್ಲಾಡಳಿತ ಎದುರಿಸಲು ಸನ್ನದ್ಧವಾಗಿದ್ದು, ಸರ್ಕಾರ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಬಡ ಜನರ ನೆರವಿಗೆ ಬಂದಿವೆ. ಅವರ ನೆರವು ಸದಾ ಕಾಲ ಹೀಗೆಯೇ ಇರಲಿ. ಪೊಲೀಸರಿಗೆ ಕೊರೊನಾ ವೈರಸ್ ಕೆಲಸದಿಂದ ಹೆಚ್ಚಿನ ಹೊರೆ ಬಿದ್ದಿದೆ. ಟಾಸ್ಕ್ ಫೋರ್ಸ್ ನಿರ್ಮಿಸಿ ಅವರ ಹೊರೆ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇನ್ನು, ಖಾಸಗಿ ಕ್ಲಿನಿಕ್ ತೆರೆಯಲು ನಿರ್ದೇಶನ ನೀಡಿದ್ದೇವೆ. ಅವರು ಕೂಡ ಎಚ್ಚರ ವಹಿಸಬೇಕು. 14ರ ನಂತರ ಸ್ವಲ್ವ ರಿಲ್ಯಾಕ್ಸ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸಿಗಲಿಲ್ಲ. 20ರ ಹೊತ್ತಿಗೆ ಇದನ್ನೇ ನಿರ್ವಹಣೆ ಮಾಡಿಕೊಂಡು ಹೋದರೆ ಇನ್ನಷ್ಟು ರಿಲ್ಯಾಕ್ಸ್ ನಮ್ಮ ಜಿಲ್ಲೆಗೆ ಸಿಗಬಹುದು ಎಂದರು.