ಕರ್ನಾಟಕ

karnataka

ETV Bharat / state

ವಿದ್ಯುತ್​​ ಬೇಲಿಗೆ ಸಿಲುಕಿ ಜಿಂಕೆ ಸಾವು: ಆರೋಪಿಗಳು ಅಂದರ್​

ಕಾಫಿ ತೋಟದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ತೋಟಕ್ಕೆ ಹಾಕಿದ್ದ ವಿದ್ಯುತ್​ ತಂತಿ ತುಳಿದು ಜಿಂಕೆಯೊಂದು ಮೃತಪಟ್ಟಿತ್ತು. ಆ ಜಿಂಕೆಯನ್ನು ಕಡಿದು ಮಾಂಸ ಮಾಡಲೆಂದು ಯತ್ನಿಸಿದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳು ವಶ

By

Published : Sep 29, 2019, 8:36 PM IST

ಚಿಕ್ಕಮಗಳೂರು:ಸತ್ತ ಜಿಂಕೆಯ ಮಾಂಸ ಕಡಿಯುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿ ಮೂವರು ತೋಟದ ಕಾರ್ಮಿಕರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಮದಲ್ಲಿ ನಡೆದಿದೆ.

ಮಾಗುಂಡಿ ಗ್ರಾಮದ ಶಶಿಕುಮಾರ್, ಶ್ರೀನಿವಾಸ್, ವೆಂಕಟೇಶ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತೋಟದ ಮಾಲೀಕ ಕೌಶಿಕ್ ಮೇಲೆ ಬೇಜವಾಬ್ದಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಫಿ ತೋಟದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ತೋಟದ ಬೇಲಿಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಜಿಂಕೆಯೊಂದು ಸಾವನಪ್ಪಿತ್ತು. ಅದನ್ನು ಯಾರಿಗೂ ತಿಳಿಯದ ಹಾಗೆ ಮಾಂಸ ಕಡಿಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇನ್ನು ಬಂಧಿತರು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ ಹಿನ್ನೆಲೆ ಜಿಂಕೆ ತಂತಿ ಬೇಲಿಗೆ ಸಿಲುಕಿ ಸಾವನ್ನಪ್ಪಿತ್ತು. ಸಾವನ್ನಪ್ಪಿದ ಜಿಂಕೆಯ ಮಾಂಸ ಕಡಿಯುವಾಗ ಬಾಳೆಹೊನ್ನೂರು ಆರ್​ಎಫ್​​ಒ ನಿರಂಜನ್ ದಾಳಿ ಮಾಡಿ ಮೂವರು ಆರೋಪಿಗಳನ್ನ ಬಂಧಿಸಿ, ಜಿಂಕೆ ಮಾಂಸವನ್ನ ವಶಪಡಿಸಿಕೊಂಡಿದ್ದಾರೆ.ಘಟನೆ ಕುರಿತು ಬಾಳೆಹೊನ್ನೂರು ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details