ಕರ್ನಾಟಕ

karnataka

ETV Bharat / state

ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತ: ಜಿಲ್ಲಾಡಳಿತದ ಈ ಆದೇಶ ಪೊಲೀಸರಿಗೆ ಗೊತ್ತಿಲ್ಲವೇ? - ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ

ಚಾರ್ಮಾಡಿ ಘಾಟ್ ರಸ್ತೆ ಇಂದಿನಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಆದ್ರೂ ಕೊಟ್ಟಿಗೆಹಾರ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದರು. ಆದ್ರೆ ಚೆಕ್ ಪೋಸ್ಟ್ ಪೊಲೀಸರಿಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ತೋರಿಸಿದ ನಂತರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಚಾರ್ಮಾಡಿ ಘಾಟ್ ರಸ್ತೆ ಸಂಚಾರಕ್ಕೆ ಅವಕಾಶ

By

Published : Sep 15, 2019, 11:39 AM IST

Updated : Sep 15, 2019, 12:10 PM IST

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇಂದಿನಿಂದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದರೂ ಕೊಟ್ಟಿಗೆಹಾರ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದರು. ಆದ್ರೆ ವಾಹನ ಸವಾರರು ಚೆಕ್ ಪೋಸ್ಟ್ ಪೊಲೀಸರಿಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ತೋರಿಸಿದ ನಂತರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಚಾರ್ಮಾಡಿ ಘಾಟ್ ರಸ್ತೆ ಸಂಚಾರಕ್ಕೆ ಅವಕಾಶ

ಕಳೆದ 15 ದಿನಗಳ ಹಿಂದೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲವೆಂದು ಎಸ್​ಪಿ ವರದಿ ನೀಡಿದ್ದರು. ಎಸ್​ಪಿ ಆದೇಶದ ಬಳಿಕ ಡಿಸಿ ತಮ್ಮ ಆದೇಶ ಹಿಂಪಡೆದಿದ್ದರು. ಇದೀಗ 2ನೇ ಬಾರಿ ಡಿಸಿ ಬಗಾದಿ ಗೌತಮ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಒದೊಂದೇ ವಾಹನಗಳನ್ನು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಪ್ರತಿ ಸಿಕ್ಕ ನಂತರ ವಾಹನಗಳನ್ನು ಬಿಡಲಾಗುತ್ತಿದೆ. ಕೊಟ್ಟಿಗೆ ಹಾರದಿಂದ ಮಂಗಳೂರು, ಧರ್ಮಸ್ಥಳ ಕಡೆ ವಾಹನ ಸಂಚಾರ ಆರಂಭವಾಗಿದೆ.

ಚಾರ್ಮಾಡಿ ಘಾಟ್ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶ
Last Updated : Sep 15, 2019, 12:10 PM IST

ABOUT THE AUTHOR

...view details