ಕರ್ನಾಟಕ

karnataka

ETV Bharat / state

ದೇವಿರಮ್ಮ ಬೆಟ್ಟ ಹತ್ತದಂತೆ ಭಕ್ತರಿಗೆ ಜಿಲ್ಲಾಡಳಿತ ಸೂಚನೆ:  ಯಾಕೆ ಗೊತ್ತಾ ಈ ದಿಢೀರ್ ನಿರ್ಧಾರ? - ದೇವಿರಮ್ಮ ಬೆಟ್ಟ ಹತ್ತುವ ಭಕ್ತಾಧಿಗಳಿಗೆ ಜಿಲ್ಲಾಡಳಿತ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆ ಶನಿವಾರ ರಾತ್ರಿ ದೇವಿರಮ್ಮ ಬೆಟ್ಟ ಹತ್ತುವ ಭಕ್ತಾಧಿಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಭಾನುವಾರ ಬೆಳಗ್ಗೆಯಿಂದ ಬೆಟ್ಟ ಹತ್ತುವಂತೆ ಭಕ್ತಾದಿಗಳಿಗೆ ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ದೇವಿರಮ್ಮ ಬೆಟ್ಟ

By

Published : Oct 25, 2019, 10:06 PM IST

ಚಿಕ್ಕಮಗಳೂರು:ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆ ಶನಿವಾರ ರಾತ್ರಿ ದೇವಿರಮ್ಮ ಬೆಟ್ಟ ಹತ್ತುವ ಭಕ್ತಾಧಿಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಭಾನುವಾರ ಬೆಳಿಗ್ಗೆಯಿಂದ ಬೆಟ್ಟ ಹತ್ತುವಂತೆ ಭಕ್ತಾದಿಗಳಿಗೆ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ದೇವಿರಮ್ಮ ಬೆಟ್ಟ

ಭಾನುವಾರ ಬೆಳಗ್ಗೆ ಬೆಟ್ಟದಲ್ಲಿ ದೇವಿರಮ್ಮ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತಿ ವರ್ಷ ರಾತ್ರಿಯೇ ಲಕ್ಷಾಂತರ ಭಕ್ತರು ದೇವಿರಮ್ಮ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದು ಭಕ್ತರು ಬರುತ್ತಿದ್ದರು. ಮಳೆ ಹೆಚ್ಚಾಗಿ ಬರುತ್ತಿರುವ ಕಾರಣ ಹಾಗೂ ಕಡಿದಾದ ಬೆಟ್ಟ ಹತ್ತಲು ಜನರಿಗೆ ಕಷ್ಟಕರ ಆಗುವ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.

ದೇವಿರಮ್ಮ ಬೆಟ್ಟ ಹತ್ತದಂತೆ ಭಕ್ತಾದಿಗಳಿಗೆ ಜಿಲ್ಲಾಡಳಿತದಿಂದ ಆದೇಶ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದು, ಬೆಟ್ಟ ಹತ್ತುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಬೆಟ್ಟ ಹತ್ತಲು ನಿಷೇಧ ಮಾಡಲಾಗಿದೆ. ಭೂ ವಿಜ್ಞಾನಿಗಳು ಪರೀಕ್ಷಿಸಿ ಬೆಟ್ಟ ಕುಸಿಯುವ ಆತಂಕ ಸಹ ವ್ಯಕ್ತಪಡಿಸಿದ್ದಾರೆ. ಇಳಿಜಾರು ಪ್ರದೇಶದಲ್ಲಿ ಜನ ಸಂದಣಿಯಿಂದ ಬೆಟ್ಟ ಕುಸಿಯುವ ಭೀತಿ ಇದ್ದು ಭಕ್ತರು ಸಹಕರಿಸಬೇಕು ಎಂದು ಜಿಲ್ಲಾಡಳಿತ ಈ ಆದೇಶದಲ್ಲಿ ಮನವಿಯನ್ನೂ ಮಾಡಿದೆ.

ABOUT THE AUTHOR

...view details