ಕರ್ನಾಟಕ

karnataka

ETV Bharat / state

ನಾಲ್ಕು ವರ್ಷದ ಬಳಿಕ ಚಿಕ್ಕಮಗಳೂರಿಗೆ ದತ್ತಾತ್ರೇಯ ವಿಗ್ರಹ ಆಗಮನ..

ನ.13ರಂದು ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ವಿಗ್ರಹ ಶೋಭಾಯಾತ್ರೆ ಮಾಡಲಾಗುತ್ತಿದ್ದು, ಇಂದು ನಗರಕ್ಕೆ ದತ್ತ ವಿಗ್ರಹವನ್ನು ತರಲಾಗಿದೆ.

Kn_ckm
ಚಿಕ್ಕಮಗಳೂರಿಗೆ ದತ್ತಾತ್ರೇಯ ವಿಗ್ರಹ ಆಗಮನ

By

Published : Nov 9, 2022, 10:51 PM IST

ಚಿಕ್ಕಮಗಳೂರು: ನಾಲ್ಕು ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹವನ್ನು ಅದ್ದೂರಿಯಾಗಿ ಕರೆ ತರಲಾಗಿದೆ. ನಾಲ್ಕು ವರ್ಷದ ಹಿಂದೆ ಶೋಭಾಯಾತ್ರೆಗೆ ಅನುಮತಿ‌ ನೀಡದೇ ಜಿಲ್ಲಾಡಳಿತ ದತ್ತಾತ್ರೇಯ ವಿಗ್ರಹವನ್ನು ವಶಕ್ಕೆ ಪಡೆದಿತ್ತು. ಬಳಿಕ ಕಾಳಿ ಮಠದಲ್ಲಿ ದತ್ತ ವಿಗ್ರಹವನ್ನು ಇಡಲಾಗಿತ್ತು. ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ಶೋಭಾಯಾತ್ರೆಗಾಗಿ ವಿಗ್ರಹ ಆಗಮಿಸಿದ್ದು, ಪೊಲೀಸರ ಬೆಂಗಾವಲಿನಲ್ಲಿ ಚಿಕ್ಕಮಗಳೂರು ನಗರಕ್ಕೆ ಆಗಮನವಾಗಿದೆ.

ನವೆಂಬರ್ 13 ರಂದು ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲು ಶ್ರೀ ರಾಮ ಸೇನೆ ಸಂಘಟನೆ ತಯಾರಿ ಮಾಡಿ ಕೊಂಡಿದ್ದು, ಜಿಲ್ಲೆಯಲ್ಲಿ 18 ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ.

ಇದನ್ನೂ ಓದಿ:ವಾಯುಪಡೆ ಸೇರುವವರಿಗೆ ಸುವರ್ಣವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details