ಕರ್ನಾಟಕ

karnataka

ETV Bharat / state

ದತ್ತಮಾಲೆ ಹಿನ್ನೆಲೆ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರ ಕಟ್ಟೆಚ್ಚರ - ಚಿಕ್ಕಮಗಳೂರು ದತ್ತ ಪೀಠ ಸುದ್ದಿ

ದತ್ತ ಜಯಂತಿ ಪ್ರಯುಕ್ತ ಡಿಸೆಂಬರ್ 9 ರಿಂದ 12 ರವರೆಗೆ ಚಿಕ್ಕಮಗಳೂರಿನಲ್ಲಿ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ​ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​

By

Published : Dec 8, 2019, 9:12 PM IST

ಚಿಕ್ಕಮಗಳೂರು : ಇಲ್ಲಿನ ದತ್ತಾತ್ರೇಯ ಪೀಠದಲ್ಲಿ ಭಜರಂಗದಳ ಹಾಗೂ ವಿಎಚ್‍ಪಿ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿಗೆ ಕಾಫಿನಾಡಿನಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ಎಸ್.​ಪಿ. ಹರೀಶ್ ಪಾಂಡೆ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​ ಘೋಷಣೆ

ಡಿಸೆಂಬರ್ 9 ರಿಂದ 12 ರವರೆಗೆ ದತ್ತಪೀಠಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಗಳಾಗಬಾರದು ಎಂದು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.ಓರ್ವ ಎಸ್ಪಿ, ಮೂವರು ಅಡಿಷನಲ್ ಎಸ್ಪಿ, 10 ಡಿವೈಎಸ್​ಪಿ, 16 ಇನ್ಸ್​ಪೆಕ್ಟರ್, 120 ಸಬ್ ಇನ್ಸ್​ಪೆಕ್ಟರ್, 250 ಎಎಸ್​ಐ, 450 ಸಿಸಿಟಿವಿ, 35 ಚೆಕ್ ಪೊಸ್ಟ್, 4,000 ಕ್ಕೂ ಅಧಿಕ ಪೊಲೀಸರು ಜಿಲ್ಲಾದ್ಯಂತ ಕಚ್ಚೆಚ್ಚರ ವಹಿಸಿದ್ದಾರೆ. ಜೊತೆಗೆ 10 ಕೆಎಸ್​ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್​ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ದತ್ತಮಾಲಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ABOUT THE AUTHOR

...view details