ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಅದ್ಧೂರಿಯಾಗಿ ದತ್ತಮಾಲಾ ಜಯಂತಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ 10 ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದು, ನಗರದ ಬಸವನಹಳ್ಳಿ ರಸ್ತೆಯುದ್ದಕ್ಕೂ ಡಿಜೆ ಸೌಂಡ್ಗೆ ಕುಡಿದು ಕುಪ್ಪಳಿಸಿದರು.
ದತ್ತಮಾಲಾ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ನಗರದ ಬಸವನಹಳ್ಳಿ ಹಾಗೂ ಹನುಮಂತಪ್ಪ ವೃತ್ತದ ಬಳಿ ಜನರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ಏಕ ಕಾಲದಲ್ಲಿ 10 ಸಾವಿರಕ್ಕೂ ಅಧಿಕ ಜನರು ಒಂದೆಡೆ ಸೇರಿ ಜೈ ದತ್ತಾತ್ರೇಯ, ಜೈ ಶ್ರೀರಾಮ್ ಎಂದು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯದಿಂದ ಕಂಗೊಳಿಸುತ್ತಿತ್ತು.