ಚಿಕ್ಕಮಗಳೂರು:ಜಿಲ್ಲೆಯಲ್ಲಿ ಶ್ರೀರಾಮ ಸೇನೆ ವತಿಯಿಂದ ನಡೆಯುತ್ತಿರುವ ದತ್ತ ಮಾಲ ಉತ್ಸವದ ಹಿನ್ನೆಲೆ ಚಿಕ್ಕಮಗಳೂರು ನಗರ ಸಂಪೂರ್ಣವಾಗಿ ಕೇಸರಿ ಬ್ಯಾನರ್ ಮತ್ತು ಬಂಟಿಗ್ಸ್ಗಳಿಂದ ಅಲಂಕೃತಗೊಂಡಿದೆ.
ನಾಳೆ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ.. ಬೃಹತ್ ಶೋಭಯಾತ್ರೆ ಆಯೋಜನೆ - dattamala abhiyana
ದತ್ತಮಾಲಾ ಅಭಿಯಾನ ನಾಳೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ದತ್ತಪೀಠದಲ್ಲಿ ದತ್ತಪಾದುಕೆಗಳ ದರ್ಶನ ಮಾಡುವುದರ ಮೂಲಕ ದತ್ತಮಾಲ ಅಭಿಯಾನಕ್ಕೆ ತೆರೆ ಬೀಳಲಿದೆ.
ಚಿಕ್ಕಮಗಳೂರಿನಲ್ಲಿ ದತ್ತಮಾಲ ಅಭಿಯಾನ ನಾಳೆ
ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಹಾಗೂ ಭಾವೈಕ್ಯತಾ ಕೇಂದ್ರವಾಗಿರೋ ಚಿಕ್ಕಮಗಳೂರಿನ ಶ್ರೀ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ನಾಳೆ ಶ್ರೀರಾಮ ಸೇನೆಯ ವತಿಯಿಂದ ನಗರದಲ್ಲಿ ದತ್ತಮಾಲ ಉತ್ಸವದ ಅಂಗವಾಗಿ ಬೃಹತ್ ಶೋಭಯಾತ್ರೆ ಜರುಗಲಿದೆ.
ಈ ಬಾರಿ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದತ್ತಪೀಠಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ದತ್ತಪಾದುಕೆ ದರ್ಶನ ಪಡೆಯುವುದರ ಮೂಲಕ ದತ್ತಮಾಲ ಉತ್ಸವಕ್ಕೆ ತೆರೆಬೀಳಲಿದೆ.