ಚಿಕ್ಕಮಗಳೂರು: ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್‍ಗೆ ಬಿಜೆಪಿ ಸಿದ್ಧತೆ ನಡೆಸಿದ ಹಿನ್ನೆಲೆ ಪ್ರತಿಕ್ರಿಯಿಸಿದ ಡಿ. ಕೆ ಶಿವಕುಮಾರ್, ನಾವು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ. ಅವರು ಏನು ಬೇಕೋ ಅದನ್ನ ಮಾಡಿಕೊಳ್ಳಲಿ. ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ನಮ್ಮ ಸರ್ಕಾರ ಬರುತ್ತೆ. ಆಗ ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಒಬ್ಬೊಬ್ಬರು ಒಂದೊಂದು ರೀಸನ್ ಹೇಳ್ತಿದ್ದಾರೆ. ನಾನು ಯಾವುದನ್ನೂ ಕೇಳಲ್ಲ. ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದಲ್ಲಿ ಅವಕಾಶ ಸಿಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಮೆಂಬರ್ ಮಾಡಿಸದಿದ್ದರೆ ವೋಟು ಹೇಗೆ ತೆಗೆದುಕೊಳ್ತಾರೆ. ನಮ್ಮ ಪಕ್ಷಕ್ಕೆ ಮೆಂಬರ್ಶಿಪ್ ಫಂಡೇಷನ್ ಎಲ್ಲರ ಕೈನಲ್ಲೂ ಮಾಡಿಸುತ್ತೇವೆ ಎಂದರು.
ಜೇಮ್ಸ್ ಸಿನಿಮಾಗೆ ಹೋಗುತ್ತೇವೆ..ನಾನು-ನನ್ನ ಪತ್ನಿ ಇಬ್ಬರೂ ಜೇಮ್ಸ್ ಸಿನಿಮಾಗೆ ಹೋಗುತ್ತೇವೆ. ಬೆಳಗ್ಗೆಯೇ ನನ್ನ ಹೆಂಡತಿಗೆ ಈ ಬಗ್ಗೆ ಹೇಳಿದ್ದೇನೆ. ಈಗಾಗಲೇ ನನ್ನ ಮಗ ಸಿನೆಮಾ ನೋಡಲು ವ್ಯವಸ್ಥೆ ಮಾಡಿದ್ದಾನೆ ಎಂದು ತಿಳಿಸಿದರು.