ಚಿಕ್ಕಮಗಳೂರು:ದರಿದ್ರದ ಮೂಲವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಇವತ್ತು ನಿರ್ವಸಿತ ಬಡವರು ಕಣ್ಣೀರು ಸುರಿಸುತ್ತಿದ್ದರೆ ಅದಕ್ಕೆ ಅವರೇ ನೇರ ಹೊಣೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸರ್ಕಾರದಲ್ಲಿ ಹಣ ಇಡದೆ ಸಿದ್ದರಾಮಯ್ಯ 11 ಲಕ್ಷ ಮನೆಗಳಿಗೆ ಮಂಜೂರಾತಿ ಕೊಟ್ಟಿದ್ದರು' - ಚಿಕ್ಕಮಗಳೂರು ಸುದ್ದಿ
ಸರ್ಕಾರದಲ್ಲಿ ಹಣ ಇಡದೆ ಮಾಜಿ ಸಿಎಂ ಸಿದ್ದರಾಮಯ್ಯ 11 ಲಕ್ಷ ಮನೆಗಳಿಗೆ ಮಂಜೂರಾತಿ ಕೊಟ್ಟಿದ್ದರು. ಇವತ್ತು ನಿರ್ವಸಿತ ಬಡವರು ಕಣ್ಣೀರು ಹಾಕುತ್ತಿದ್ದರೆ ಅದಕ್ಕೆ ಅವರೇ ಕಾರಣ ಎಂದು ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿ, ಡಿಕೆಶಿ ಹಲವು ಬಾರಿ ಸದನದಲ್ಲಿ ನಾನೂ ಸ್ವಯಂ ಸೇವಕನೆಂದು ಪರಿಚಯಿಸಿಕೊಂಡಿದ್ದರು. ನಾನೂ ಸಂಘದ ಪ್ರಾರ್ಥನೆ ಹೇಳುತ್ತೇನೆ ಎಂದಿದ್ದರು. ರವಿ, ನಿನಗೆ ಪ್ರಾರ್ಥನೆ ಬರುತ್ತಾ? ನಾನ್ ಹೇಳ್ತೀನಿ ಅಂತಿದ್ದರು. ಅವರು ಸ್ವಯಂ ಸೇವಕ ಆಗಿದ್ದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಯಂ ಸೇವೆಯ ಭಾವನೆ ಇದ್ದರೆ ಒಳ್ಳೆಯದ್ದನ್ನೇ ಬಯಸುತ್ತಾರೆ ಎಂದರು.