ಚಿಕ್ಕಮಗಳೂರು:ಶಾಸಕ ಸಿ.ಟಿ.ರವಿ ಅವರು ಸಿದ್ದರಾಮಯ್ಯ 75ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದು, ದೇವರು ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸಿದ್ದಾರೆ. ಇದೇ ವೇಳೆ, ಎರಡ್ಮೂರು ದಿನದ ಮಳೆಗೆ 13 ಜನ ಅಕಾಲಿಕ ಮೃತ್ಯುಗೀಡಾಗಿದ್ದಾರೆ. ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ?. ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಂಡಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ 75ನೇ ವರ್ಷದ ಹುಟ್ಟುಹಬ್ಬ: ಹಾರೈಕೆಯೊಂದಿಗೆ ಪ್ರಶ್ನೆ ಮಾಡಿದ ಸಿ.ಟಿ.ರವಿ - ಸಿದ್ದರಾಮಯ್ಯ 75ನೇ ವರ್ಷದ ಹುಟ್ಟುಹಬ್ಬ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬಕ್ಕೆ ಬಿಜೆಪಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಶುಭ ಹಾರೈಸಿದ್ದಾರೆ.
ಶಾಸಕ ಸಿ ಟಿ ರವಿ
ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಡಿ-ಹೊಗಳೋದು ಮಾನವೀಯತೆ ಇರುವವರಿಗೆ ಶೋಭೆ ತರೋದಲ್ಲ. ಬಿಜೆಪಿ ಸರ್ಕಾರವೂ 3 ವರ್ಷದ ತುಂಬಿದ್ದಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕರ್ತ ಪ್ರವೀಣ್ ಸಾವನ್ನಪ್ಪಿದ್ದಕ್ಕೆ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಿದ್ವಿ. ಇಂದು ಸೂತಕದ ಮನೆಯಲ್ಲಿ ಸಂಭ್ರಮ ಅಂತ ಕೆಲವರಿಗಾದರೂ ಅನ್ನಿಸಬೇಕಿತ್ತು ಎಂದು ಹೇಳಿದರು.
ಇದನ್ನೂ ಓದಿ:ಮೀಸಲು ಸೌಲಭ್ಯ ಹೆಚ್ಚಳಕ್ಕೆ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಧರಣಿ.. ಮನವೊಲಿಸಿದ ಹೆಚ್ಡಿಕೆ