ಕರ್ನಾಟಕ

karnataka

ETV Bharat / state

ಟ್ರಂಪ್‌ ವಿರುದ್ಧ ಪ್ರತಿಭಟಿಸಿದ ರೈತ ಸಂಘಟನೆಗಳಿಗೆ ಸಚಿವ ಸಿ ಟಿ ರವಿ ಅವಮಾನ!?.. ಏನ್‌ ಹೇಳಿದರು ನೋಡಿ.. - CT Ravi talks against Siddaramaiah in chikkamagaluru

70 ವರ್ಷ ದಾಟಿದ ಸಿದ್ದರಾಮಯ್ಯ ಅವರು, ಯಾರು ಮೂರು ದಿನ ಬರುತ್ತಿಲ್ಲ. ಅವರೇ ಅವಲೋಕನ ಮಾಡಿಕೊಳ್ಳಲಿ. ಯಾರ ಸ್ನೇಹಿತರ ಸಂಪರ್ಕ ಹೇಗಿದೆ ಎಂದು ತಿಳಿದುಕೊಂಡು ಇನ್ನೊಬ್ಬರನ್ನು ದೂಷಿಸಲಿ ಎಂದು ಕಿಡಿಕಾರಿದ್ದಾರೆ.

minister CT Ravi
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ

By

Published : Feb 24, 2020, 3:28 PM IST

ಚಿಕ್ಕಮಗಳೂರು :ಗೋ ಬ್ಯಾಕ್​ ಟ್ರಂಪ್​, ಪಾಕ್​ ಪರ ಘೋಷಣೆ ಕೂಗುತ್ತಾರೆ. ಹುಟ್ಟಿನಿಂದಲೇ ದ್ವೇಷ ಹೊತ್ತು ಬರುವವರಿದ್ದಾರೆ. ಆನೆ ರಸ್ತೆಯಲ್ಲಿ ನಡೆದು ಹೊರಟಾಗ ಡ್ಯಾಶ್​.. ಡ್ಯಾಶ್​ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ನಾಲಿಗೆ ಹರಿಬಿಟ್ಟಿದ್ದಾರೆ.

70 ವರ್ಷ ದಾಟಿದ ಸಿದ್ದರಾಮಯ್ಯ ಅವರು, ಯಾರು ಮೂರು ದಿನ ಬರುತ್ತಿಲ್ಲ. ಅವರೇ ಅವಲೋಕನ ಮಾಡಿಕೊಳ್ಳಲಿ. ಯಾರ ಸ್ನೇಹಿತರ ಸಂಪರ್ಕ ಹೇಗಿದೆ ಎಂದು ತಿಳಿದುಕೊಂಡು ಇನ್ನೊಬ್ಬರನ್ನು ದೂಷಿಸಲಿ ಎಂದು ಕಿಡಿಕಾರಿದ್ದಾರೆ.

ಗೋ ಬ್ಯಾಕ್‌ ಟ್ರಂಪ್‌ ಎಂದು ಪ್ರತಿಭಟಿಸಿದ್ದ ರೈತ ಸಂಘಟನೆಗಳ ವಿರುದ್ಧ ಸಚಿವ ಸಿ ಟಿ ರವಿ ಪ್ರತಿಕ್ರಿಯೆ..

ಕ್ಯಾಶಿನೋ ವಿಷಯ ಕುರಿತು ಸಿದ್ದರಾಮಯ್ಯ ಅವರು ಸಿ ಟಿ ರವಿ ವಿರುದ್ಧ ಈಚೆಗೆ ಕುಟುಕಿದ್ದರು. ಯಾವುದೇ ಗುಣವಾಗಲಿ ವಂಶಪಾರಂಪರ್ಯವಲ್ಲ. ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿ ಸೇರ್ಪಡೆಯಾಗಿದ್ದು ಸ್ವಾಗತಾರ್ಹ. ಅಪ್ಪನಂತೆ ಮಗಳು ಇರುವುದಿಲ್ಲ. ಗಾಂಧಿಯವರಂತೆ ಅವರ ಮಗ ಹರಿಲಾಲ್ ಬದುಕಲಿಲ್ಲ ಎಂದರು. ಕಲಬುರ್ಗಿಯಲ್ಲಿ ಇವತ್ತು ರೈತ ಸಂಘಟನೆಗಳು ಗೋ ಬ್ಯಾಕ್ ಟ್ರಂಪ್‌ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದವು.

ABOUT THE AUTHOR

...view details