ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಗೂಸುಂಬೆ ತರ ಆಡಬಾರದು: ಸಿ.ಟಿ.ರವಿ ವ್ಯಂಗ್ಯ

ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕಿದ್ದಾರೆ. ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕ ಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ ಎಂದು ಸಿ.ಟಿ. ರವಿ ಕುಟುಕಿದರು.

ct-ravi-talk-about-statement-of-siddaramaiah-in-chikkamagaluru
ಸಿ.ಟಿ. ರವಿ ವ್ಯಂಗ್ಯ

By

Published : Dec 18, 2020, 10:20 PM IST

ಚಿಕ್ಕಮಗಳೂರು: ನನ್ನ ಸೋಲಿಗೆ ನಮ್ಮವರೇ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಸಿ.ಟಿ. ರವಿ ವ್ಯಂಗ್ಯ

ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಸೋಲಿನ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ನಮಗೆ ಜನಾಭಿಪ್ರಾಯವಿಲ್ಲ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎನ್ನಬೇಕಿತ್ತು. ರಾಜ ಮರ್ಯಾದೆಯ ರಾಜ ಗೌರವ ಹುಡುಕ ಬೇಕಿತ್ತು, ಆದರೆ ಏಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದರು?.

ಉಗಿದದ್ದನ್ನ ಯಾರಾದರೂ ಬಾಯಿಗೆ ಹಾಕಿಕೊಳ್ತಾರಾ, ತನ್ನನ್ನ ಸೋಲಿಸಿದವರ ಜೊತೆನೇ ಸರ್ಕಾರ ಮಾಡ್ತಾರಾ?. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕೆಂದು ಒಟ್ಟಿಗೆ ಆಗಿದ್ದರು. ಯಾವ ಮುಖ ಇಟ್ಟುಕೊಂಡು ಒಪ್ಪಿಕೊಂಡರು, ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣವಾ. ಚಾಕೋಲೆಟ್ ಇರಲಿ ಮತ್ತೊಂದು ಇರಲಿ, ಮಕ್ಕಳು ಕೂಡ ಉಗಿದಿದ್ದನ್ನ ಬಾಯಿಗೆ ಹಾಕಿಕೊಳ್ಳಲ್ಲ. ನೀವು ಏಕೆ ಬಾಯಿಗೆ ಹಾಕಿಕೊಂಡಿರಿ ಎಂದು ಪ್ರಶ್ನಿಸಿದರು.

ಓದಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯ ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಾರೆ. ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆ ತಾನೆ ಲೋಕಸಭೆ ಎಲೆಕ್ಷನ್ ಒಟ್ಟಿಗೆ ಮಾಡಿದ್ದು, ಅಧಿಕಾರ ಹಂಚಿಕೊಂಡು ತನ್ನವರ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ವಾ?.

ನಾನು ದಳ - ಕಾಂಗ್ರೆಸ್ ವಕ್ತಾರನಲ್ಲ, ನಾನು ನಮ್ಮ ಪಕ್ಷದ ವಕ್ತಾರ. ಸಿದ್ದರಾಮಯ್ಯ- ಕುಮಾರಸ್ವಾಮಿ ಯಾರನ್ನೂ ಸಮರ್ಥಿಸಿಲ್ಲ. ನಾವು ವಿಚಾರದ ಆಧಾರ, ಕಾರ್ಯಕರ್ತರಿಂದ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇವೆ ಎಂದು ಸಿ.ಟಿ. ರವಿ ಹೇಳಿದರು.

ABOUT THE AUTHOR

...view details