ಚಿಕ್ಕಮಗಳೂರು:ಚಂದ್ರು ಹತ್ಯೆ ಬಗ್ಗೆ ಸಚಿವರ-ಪೊಲೀಸರ ಪ್ರತ್ಯೇಕ ಹೇಳಿಕೆ ಕುರಿತು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಚಂದ್ರು ಹತ್ಯೆ, ಹಿನ್ನೆಲೆ ಕುರಿತು ಆತನ ತಾಯಿ, ಪ್ರತ್ಯಕ್ಷದರ್ಶಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಹತ್ಯಾ ಮೂಲ ಬಿಟ್ಟು ಬೇರೆಲ್ಲ ವಿಚಾರಗಳು ಚರ್ಚೆಯಾಗುತ್ತಿವೆ. ಹತ್ಯೆ ಮಾಡಿದ್ದೇ ಒಂದು ಅಪರಾಧ, ಹತ್ಯೆ ಮಾಡುವಂತಹ ಸನ್ನಿವೇಶವೇ ಇರಲಿಲ್ಲ. ಅಂತಹ ಮನಸ್ಥಿತಿ ಯಾಕೆ ಬಂತು?. ಈ ಬಗ್ಗೆ ಯೋಚನೆ ಮಾಡಿ, ಆಗ ಸತ್ಯ ಹೊರಗೆ ಬರುತ್ತೆ ಎಂದರು.
ಚಂದ್ರು ಹತ್ಯೆಯ ಮೂಲ ಬಿಟ್ಟು ಉಳಿದೆಲ್ಲವೂ ಚರ್ಚೆಯಾಗುತ್ತಿವೆ: ಸಿ.ಟಿ.ರವಿ - ಚಂದ್ರು ಹತ್ಯೆ ಪ್ರಕರಣ
ಚಂದ್ರು ಹತ್ಯೆ, ಹಿನ್ನೆಲೆ ಕುರಿತು ಆತನ ತಾಯಿ, ಪ್ರತ್ಯಕ್ಷದರ್ಶಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಹತ್ಯಾ ಮೂಲ ಬಿಟ್ಟು ಬೇರೆಲ್ಲ ವಿಚಾರಗಳು ಚರ್ಚೆಯಾಗುತ್ತಿವೆ.- ಸಿ.ಟಿ.ರವಿ
![ಚಂದ್ರು ಹತ್ಯೆಯ ಮೂಲ ಬಿಟ್ಟು ಉಳಿದೆಲ್ಲವೂ ಚರ್ಚೆಯಾಗುತ್ತಿವೆ: ಸಿ.ಟಿ.ರವಿ MLA C.T.Ravi talked to Press](https://etvbharatimages.akamaized.net/etvbharat/prod-images/768-512-14981411-thumbnail-3x2-ckm.jpg)
ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಟಿ.ರವಿ
ಸಣ್ಣ ಸಣ್ಣ ವಿಚಾರಗಳಿಗೆ ಅವರು ಯಾಕೆ ಕೆರಳುತ್ತಾರೆ?. ಅಖಂಡ ಶ್ರೀನಿವಾಸ್ ಮನೆಗೆ, ನೂರಾರು ಜನರ ಮನೆಗೆ ಕೆ.ಜಿ.ಹಳ್ಳಿ ಮತ್ತು ಡಿ.ಜಿ.ಹಳ್ಳಿಯಲ್ಲಿ ಯಾಕೆ ಎಲ್ಲರೂ ಸೇರಿ ಬೆಂಕಿ ಹಾಕಿದ್ರು. ಅವರ ರಕ್ತ ಮಾತ್ರ ಕೆಂಪಗಿರೋದಾ, ನಮ್ಮದಲ್ವಾ? ಅವರಿಗೆ ಮಾತ್ರ ಕ್ರೋಧ, ತಮ್ಮತನ ಇರೋದಾ, ಉಳಿದವರಿಗಿಲ್ವಾ? ಎಂದು ಸಿ.ಟಿ ರವಿ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ