ಚಿಕ್ಕಮಗಳೂರು :ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ ನೋಡೋಣ. ಆಗ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರಲ್ಲಿ ಒಬ್ಬರು ಹೊರಗೆ ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅಥವಾ ಡಿ ಕೆ ಶಿವಮಾರ್ ಇಬ್ಬರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ರೆ ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರುತ್ತಾರೆ.
ಕಾಂಗ್ರೆಸ್ನವರಿಗೆ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲಾಗಲಿಲ್ಲ, ಸೆಳೆಯೋದು ಎಲ್ಲಿ ಬಂತು. ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎಂಬುದರ ಕುರಿತಂತೆ ಸಂಶೋಧನಾ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ. ಸುದ್ದಿಯಲ್ಲಿ ಇರಬೇಕು ಎಂದು ಆಗಾಗ ಹೀಗೆ ಹೇಳುತ್ತಿರುತ್ತಾರೆ ಎಂದರು.