ಕರ್ನಾಟಕ

karnataka

ETV Bharat / state

ಇನ್ನೊಬ್ಬರ ಹಣ, ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ: ಡಿಕೆಶಿ ವಿರುದ್ಧ ಸಿಟಿ ರವಿ ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಚಿಕ್ಕಮಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

CT Ravi slammed DK Shivakumar
ಡಿಕೆಶಿ ವಿರುದ್ಧ ಸಿಟಿ ರವಿ ವಾಗ್ದಾಳಿ

By

Published : Dec 19, 2021, 7:01 PM IST

ಚಿಕ್ಕಮಗಳೂರು :ದತ್ತ ಪೀಠದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯುತ್ತಿದ್ದಾರೆ.

ಡಿಕೆಶಿ ವಿರುದ್ಧ ಸಿಟಿ ರವಿ ವಾಗ್ದಾಳಿ

ಹೊನ್ನಮ್ಮನಹಳ್ಳದಿಂದ ಪಾದಯಾತ್ರೆ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಕಾಲ್ನಡಿಗೆ ಮೂಲಕ ದತ್ತಪೀಠಕ್ಕೆ ತೆರಳಿದರು. ಇಲ್ಲಿಗೆ ರಾಜ್ಯದ ವಿವಿಧ ಕಡೆಗಳಿಂದ ಮಾಲಾಧಾರಿಗಳು ಆಗಮಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ದೇಶಭಕ್ತಿ ಸಂಘಟನೆ ಆರ್​​ಎಸ್ಎಸ್ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ. ಕೊತ್ವಾಲ್ ರಾಮಚಂದ್ರನ ಚೇಲಾಗಳಾದವರಿಗೆ ಉಳಿದವರು ಹಾಗೆ ಕಾಣುತ್ತಾರೆ.

ನಾನು ಶಾಸಕನಾದ ಮೇಲೆ ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಅಕ್ರಮ ಸಂಪತ್ತು ಮಾಡಿಕೊಂಡು ಜೈಲು-ಬೇಲು ಕಂಡವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್​​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಲ್ನಡಿಗೆ ಮೂಲಕ ದತ್ತಪೀಠಕ್ಕೆ ತೆರಳಿದ ಸಿ ಟಿ ರವಿ

ನಾನು ದತ್ತಪೀಠ,ಜನಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ. ಹಣ,ಇನ್ನೊಬ್ಬರ ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ. ಅಕ್ರಮ ಸಂಪತ್ತು ಗಳಿಸಿ ಜೈಲಿಗೆ ಹೋಗಿರುವ ಬೇಲ್​​​ನಲ್ಲಿ ಹೊರ ಬಂದಿರುವ ಯಾವುದೇ ಕುಖ್ಯಾತಿ ನನಗಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸಿಟಿ ರವಿಗೆ ಲೂಟಿ ರವಿ ಎಂದ ಡಿಕೆಶಿ: ಡಿಕೆಯಲ್ಲ ಕೆಡಿ ಎಂದು ತಿರುಗೇಟು ನೀಡಿದ ಸಿಟಿ ರವಿ

ABOUT THE AUTHOR

...view details