ಕರ್ನಾಟಕ

karnataka

ETV Bharat / state

ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ ಟಿ ರವಿ - Hindu temple money should only be used for the Hindu temple says CT ravi

ಮುಸ್ಲಿಂಗೆ ವಕ್ಫ್ ಬೋರ್ಡ್ ಇದೆ, ಕ್ರಿಶ್ಚಿಯನ್ಸ್​​ಗೆ ಅವರ ಬೋರ್ಡ್ ಇದೆ. ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಹಿಂದೂಗಳ ದೇವಾಲಯಕ್ಕೆ ಸರ್ಕಾರದ ಹಸ್ತಕ್ಷೇಪ ಯಾಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನಿಸಿದ್ದಾರೆ.

ಸಿ ಟಿ ರವಿ
ಸಿ ಟಿ ರವಿ

By

Published : Dec 30, 2021, 3:39 PM IST

ಚಿಕ್ಕಮಗಳೂರು: ಹಿಂದೂ ದೇವಾಲಯದ ಹಣವನ್ನ ಹಿಂದೂ ದೇವಾಲಯಕ್ಕೆ ಮಾತ್ರ ಬಳಸುವ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಮುಸ್ಲಿಂಗೆ ವಕ್ಫ್ ಬೋರ್ಡ್ ಇದೆ. ಕ್ರಿಶ್ಚಿಯನ್ಸ್​ಗೆ ಅವರ ಬೋರ್ಡ್ ಇದೆ. ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಹಿಂದೂಗಳ ದೇವಾಲಯಕ್ಕೆ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು?. ಈ ಮೂಲಕ ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದರು.

ಇದನ್ನೂ ಓದಿ : ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ

ಕರೆಂಟ್ ಬಿಲ್‍ನಲ್ಲೂ ಮಸೀದಿ-ದೇವಸ್ಥಾನಕ್ಕೆ ಒಂದೊಂದು ರೇಟ್ ಇದೆಯಂತೆ. ಪರ್ ಯೂನಿಟ್ ರೇಟ್ ಎಷ್ಟು ಬಳಸುತ್ತಾರೋ ಅಷ್ಟು ಹಣ ಎಲ್ಲರಿಗೂ ಸಮ ಇರಬೇಕು. ದೇವಸ್ಥಾನಗಳು ಸಮಾಜದ ಸ್ವತ್ತು, ದೇಶಾದ್ಯಂತ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದರು.

ಭಕ್ತರು ದಾನ-ದತ್ತಿ ನೀಡಿದ್ದಾರೆ, ಭಾವನೆ ಬೆರೆಸಿ ಕಾಣಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

For All Latest Updates

ABOUT THE AUTHOR

...view details