ಕರ್ನಾಟಕ

karnataka

ETV Bharat / state

ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ : ಹೆಚ್​​ಡಿಕೆಗೆ ಶಾಸಕ ಸಿ.ಟಿ. ರವಿ ಟಾಂಗ್​​​ - ಚಿಕ್ಕಮಗಳೂರು ಜಿಲ್ಲಾ ಸುದ್ದಿ

ಸಂಘದಲ್ಲಿ ಇರುವವರು ಸ್ವಯಂ ಸೇವಕರು, ಅವರಿಗೆ ಸದಸ್ಯತ್ವ ಕೊಡೋದಿಲ್ಲ. ಸದಸ್ಯತ್ವ ಇಲ್ಲ ಅಂದ್ಮೇಲೆ ವಿವಿಯ ಸಿಂಡಿಕೇಟ್ ಸದಸ್ಯರು ಹೇಗೆ ಆಗ್ತಾರೆ. ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ ಎಂದು ಹೆಚ್​​ಡಿಕೆ ಕುರಿತು ವ್ಯಂಗ್ಯವಾಡಿದರು..

ct-ravi-reaction-on-hd-kumaraswamy-rss-statement
ಸಿಟಿ ರವಿ

By

Published : Oct 16, 2021, 9:37 PM IST

ಚಿಕ್ಕಮಗಳೂರು :ಆರ್​​ಎಸ್​ಎಸ್​​ನಲ್ಲಿ ಇರುವವರು ಸ್ವಯಂ ಸೇವಕರು. ಅವರಿಗೆ ಸದಸ್ಯತ್ವ ಕೊಡೋದಿಲ್ಲ. ಸದಸ್ಯತ್ವ ಇಲ್ಲ ಅಂದ್ಮೇಲೆ ಅವರು ವಿವಿ ಸಿಂಡಿಕೇಟ್​​ ಸದಸ್ಯರು ಹೇಗೆ ಆಗ್ತಾರೆ. ಈ ಹೇಳಿಕೆಯಲ್ಲಿ ಕುಮಾರಸ್ವಾಮಿಯವರ ಅಜ್ಞಾನ ತಿಳಿಯುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿದರು.

ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ವಿರುದ್ಧ ಸಿ ಟಿ ರವಿ ವಾಗ್ದಾಳಿ

ನಗರದಲ್ಲಿ ಮಾತನಾಡಿದ ಅವರು, ಎಲ್ಲಾ ವಿವಿಗಳಲ್ಲಿ ಆರ್​ಎಸ್​ಎಸ್​ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಆರ್​ಎಸ್​ಎಸ್​ ಏನು ಅಂತಾ ಕುಮಾರಸ್ವಾಮಿ ತಿಳ್ಕೊಳ್ಳೋ ಪ್ರಯತ್ನ ಮಾಡಿಲ್ಲ. ಸ್ವಯಂಸೇವಕ ಆದಾಗ ಮಾತ್ರ ಅರ್ಥವಾಗುತ್ತೆ.

ಸಂಘದಲ್ಲಿ ಇರುವವರು ಸ್ವಯಂ ಸೇವಕರು, ಅವರಿಗೆ ಸದಸ್ಯತ್ವ ಕೊಡೋದಿಲ್ಲ. ಸದಸ್ಯತ್ವ ಇಲ್ಲ ಅಂದ್ಮೇಲೆ ವಿವಿಯ ಸಿಂಡಿಕೇಟ್ ಸದಸ್ಯರು ಹೇಗೆ ಆಗ್ತಾರೆ. ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ ಎಂದು ಹೆಚ್​​ಡಿಕೆ ಕುರಿತು ವ್ಯಂಗ್ಯವಾಡಿದರು.

ಆರ್​ಎಸ್​ಎಸ್ ಇಲ್ದಿದ್ರೆ ಭಾರತ್ ಮಾತಾ ಕೀ ಜೈ ಅನ್ನೋಕೆ ಯಾರು ಇರ್ತಾ ಇದ್ರು. ಜೆಡಿಎಸ್​ನಲ್ಲಿ ದೇವೇಗೌಡ್ರಿಗೆ ಜೈ, ಕುಮಾರಣ್ಣನಿಗೆ ಜೈ, ನಿಖಿಲ್ ಅಣ್ಣನಿಗೆ ಜೈ. ಕಾಂಗ್ರೆಸ್​​ನಲ್ಲಿ ಸೋನಿಯಾಗಾಂಧಿಗೆ ಜೈ, ರಾಹುಲ್ ಗಾಂಧಿಗೆ ಜೈ, ಪ್ರಿಯಾಂಕ ಗಾಂಧಿಗೆ ಜೈ. ಭಾರತ ಮಾತಾ ಕಿ ಜೈ ಅನ್ನೋದು ಅವರ ದೃಷ್ಟಿಯಲ್ಲಿ ಅಪರಾಧ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

ABOUT THE AUTHOR

...view details