ಕರ್ನಾಟಕ

karnataka

By

Published : Sep 28, 2020, 5:26 PM IST

ETV Bharat / state

ಕಾಂಗ್ರೆಸ್​ - ಜೆಡಿಎಸ್ ರೈತರ ಮುಖವಾಡ ಹಾಕಿಕೊಂಡು ಹೋರಾಟ ಮಾಡುತ್ತಿವೆ; ಸಿಟಿ ರವಿ

ಬಿಜೆಪಿ ವಿರೋಧ ಮಾಡಬೇಕು, ಮೋದಿ ಅವರನ್ನು ವಿರೋಧ ಮಾಡಬೇಕು ಅನ್ನೋದು ಪ್ರತಿಪಕ್ಷ ನಾಯಕರ ಕಾಯಕ. ಈ ರೀತಿಯಾಗಿ ರೈತರ ಮುಖವಾಡ ಹಾಕಿಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

CT Ravi Reaction About Karnataka Bandh
ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ

ಚಿಕ್ಕಮಗಳೂರು: ಇಂದಿನ ಬಂದ್ ​ಅನ್ನು ಕರ್ನಾಟಕದ ಜನರು ತಿರಸ್ಕಾರ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಹೇಳಿದ್ದಾರೆ.

ಇಂದು ಕರೆಯಲಾಗಿದ್ದ ಕರ್ನಾಟಕ ಬಂದ್ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ನಮ್ಮ ಜೊತೆ ಇದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ ಬೇಡಿಯನ್ನು ಕಳಚುವ ಕೆಲಸ ಈ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ಮುಂಚೆ ರೈತರು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಿ ಮಾತ್ರ ಮಾರಬೇಕಿತ್ತು. ಆದರೆ, ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದಾಗಿದೆ. ಇದರಿಂದ ರೈತರಿಗೆ ಆಗುತ್ತಿದ್ದ ಶೋಷಣೆ ತಪ್ಪಿದಂತಾಗಿದೆ ಎಂದು ಕೃಷಿ ಮಸೂದೆ ವಿಚಾರವಾಗಿ ಸರ್ಕಾರದ ವಿರುದ್ಧ ಬಂಡೆದ್ದಿರುವ ಅನ್ನದಾತರಿಗೆ ಮನವರಿಕೆ ಮಾಡಿಕೊಟ್ಟರು.

ಕಾಂಗ್ರೆಸ್​ ಹಾಗೂ ಜೆಡಿಎಸ್ ಹೋರಾಟ ಮಾಡುತ್ತಿರುವುದು ರೈತರ ಪರ ಅಲ್ಲ, ದಲ್ಲಾಳಿಗಳ ಪರವಾಗಿ. ಊರಿನಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಸ್ಪರ್ಧೆ ಇರುವುದಿಲ್ಲ. ಹೆಚ್ಚು ಬೆಲೆ ನೀಡುವವರಿಗೆ ಮಾರಿದರೆ ತಪ್ಪಿಲ್ಲ. ಎಲ್ಲದಕ್ಕೂ ವಿರೋಧ ಮಾಡಬೇಕು, ಬಿಜೆಪಿ ವಿರೋಧ ಮಾಡಬೇಕು, ಮೋದಿ ಅವರನ್ನು ವಿರೋಧ ಮಾಡಬೇಕು ಅನ್ನೋದು ಪ್ರತಿಪಕ್ಷ ನಾಯಕರ ಕಾಯಕ. ಈ ರೀತಿಯಾಗಿ ರೈತರ ಮುಖವಾಡ ಹಾಕಿಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ

ಇದರಿಂದ ರೈತರಿಗೆ ಸ್ವತಂತ್ರ್ಯ ಸಿಗಲಿದೆ. ದಲ್ಲಾಳಿಗಳು ಈ ಹಿಂದೆ ಬಲಿತುಕೊಂಡಿದ್ದರು. ಈಗ ರೈತ ಬಲಿದುಕೊಳ್ಳುತ್ತಾರೆ. ಈ ಕುರಿತು ನಾವು ಜನ ಜಾಗೃತಿ ಮಾಡುತ್ತೇವೆ. ಶೇ. 90 ರಷ್ಟು ರೈತರು ನಮ್ಮ ಜೊತೆ ಇದ್ದಾರೆ. ನಾನು ರೈತ ಚಳವಳಿಯಿಂದ ಬಂದಿದ್ದೇನೆ. ರೈತರ ತಾಕತ್ತು ಏನೆಂಬುದು ನನಗೆ ತಿಳಿದಿದೆ. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರವೂ ಉಳಿಯೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಕೃಷಿ ಮಸೂದೆಯನ್ನು ಸಮರ್ಥಿಸಿಕೊಂಡರು.

ABOUT THE AUTHOR

...view details