ಕರ್ನಾಟಕ

karnataka

ETV Bharat / state

‘ಕಳ್ಳನ ಹೆಂಡತಿ ಯಾವತ್ತಿದ್ರು__’: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿ ಟಿ ರವಿ ಕಿಡಿ - ಬಿಜೆಪಿ ಸಿಎಂ ಬಿಎಸ್​ವೈ

ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವ ಸುದ್ದಿ ಕುರಿತು ಸಿ ಟಿ ರವಿ ಗರಂ ಆಗಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರದಿ ಕೊಟ್ಟಿದ್ದಾರೆ ಎಂಬುದು ಸುಳ್ಳುಸುದ್ದಿ. ಇದನ್ನ ಬೇಕು ಅಂತಲೇ ಹರಡುತ್ತಿದ್ದಾರೆ ಎಂದಿದ್ದಾರೆ.

CT Ravi
ಸಿಟಿ ರವಿ

By

Published : Jun 22, 2021, 7:04 PM IST

ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹರಿದಾಡುತ್ತಿರುವ ಸುದ್ದಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕನ್ನಡದಲ್ಲಿ ಒಂದು ಗಾದೆ ಮಾತಿಗೆ ಕಳ್ಳನ ಹೆಂಡತಿ ಯಾವತ್ತಿದ್ರು _​ ಎಂದು ಕಿಡಿಕಾರಿದರು.

ಸಿಎಂ ಬದಲಾವಣೆ ಅನ್ನೋದು ಒಂದು ಸುಳ್ಳು ಸುದ್ದಿ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರದಿ ಕೊಟ್ರು ಅನ್ನೋದು ಸಹ ಸುಳ್ಳು ಸುದ್ದಿ. ಈ ರೀತಿ ವದಂತಿ ಹರಡುವವರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ, ಇದರ ಹಿಂದೆ ಯಾರೋ ಷಡ್ಯಂತ್ರ ನಡೆಸುತ್ತಿರುವಂತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿ ಟಿ ರವಿ ಕಿಡಿ

ಸುದ್ದಿ ಜೀವಂತವಾಗಿರುವಂತೆ ಮಾಡಲಾಗುತ್ತಿದೆ. ಕೆಲಸ ಇಲ್ದೆ ಇರೋರು ಇಂತದ್ದೆಲ್ಲಾ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸುವವರೇ ಈ ವದಂತಿ ಹರಡುತ್ತಿದ್ದಾರೆ. ಸಿಎಂಗೆ ನಾವೆಲ್ಲ ಸಲಹೆ ನೀಡಬಹುದು. ನಾವು ಸಲಹೆ ಕೊಡಬಹುದಾದ ಜಾಗದಲ್ಲಿ ಸಲಹೆ ಕೊಡುತ್ತೇವೆ ಎಂದು ಸಿ ಟಿ ರವಿ ಹೇಳಿದ್ರು.

ಓದಿ:ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್ಸಿಗರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ : ಸಚಿವ ಆರ್. ಅಶೋಕ್​

ABOUT THE AUTHOR

...view details