ಚಿಕ್ಕಮಗಳೂರು:ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಬರಹಕ್ಕೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೆಂಡಾ ಮಂಡಲರಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪಿಎಫ್ಐ ನವರು ನೆಪಕ್ಕೆ ಮಾತ್ರ ಆರ್ಎಸ್ಎಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ಅವರ ಉದ್ದೇಶ ಇರೋದು ಭಾರತೀಯರು, ಭಾರತೀಯತೆ ಮೇಲೆ. ಅವರ ಯುದ್ದದ ಉದ್ದೇಶ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡೋದು. ಅವರ ಮೂಲ ನಂಬಿಕೆಗಳಲ್ಲೇ ಅಸಹಿಷ್ಣತೆಯ ದೋಷವಿದೆ. ಮತ್ತೊಂದು ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆಯಿದೆ ಎಂದು ರವಿ ಹರಿಹಾಯ್ದಿದ್ದಾರೆ.