ಚಿಕ್ಕಮಗಳೂರು:ನಗರದಲ್ಲಿ ಕೆಲವರು ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಶಾಸಕ ರಾಜೇಗೌಡ ನೇತೃತ್ವದಲ್ಲಿ ನಾಳೆ ಪ್ರತಿಭಟನೆ ನಡೆಯಲಿದೆ. ಈ ಕುರಿತು ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆ ಮಾಡುವುದು ಅವರ ಕೆಲಸ, ಮಾಡಲಿ; ಕಾಂಗ್ರೆಸ್ಗೆ ಸಚಿವ ಸಿ.ಟಿ. ರವಿ ಟಾಂಗ್ - ಶಂಕರಾಚಾರ್ಯರ ಪುತ್ಥಳಿ ಮೇಲೆ ಬ್ಯಾನರ್ ಸುದ್ದಿ
ಶೃಂಗೇರಿಯಲ್ಲಿ ಕೆಲವರು ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ನಾಳೆ ಕಾಂಗ್ರೆಸ್ನವರು ನಡೆಸಬೇಕೆಂದಿರುವ ಪ್ರತಿಭಟನಾ ನಿರ್ಧಾರಕ್ಕೆ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಿ.ಟಿ. ರವಿ, ಪ್ರತಿಭಟನೆ ಮಾಡುವುದು ಅವರ ಕೆಲಸ, ಮಾಡಲಿ. ಶೃಂಗೇರಿಯಲ್ಲಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಅನ್ಯಕೋಮಿನ ಬ್ಯಾನರ್ ಹಾಕಿರುವ ವಿಚಾರವಾಗಿ ಪ್ರಾಥಮಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸುವವರೆಗೂ ಕಾಂಗ್ರೆಸ್ನವರು ಯಾರೂ ಮಾತನಾಡಿಲ್ಲ. ಆದರೆ ಈಗ ಮಾತನಾಡುತ್ತಿದ್ದಾರೆ. ಒಂದು ವೇಳೆ ಎಸ್ಡಿಪಿಐ ಸಂಘಟನೆಯವರು ಮಾಡಿದ್ದರೆ, ಇವರು ಮುಜುಗರಕ್ಕೆ ಒಳಗಾಗಿ ಪ್ರತಿಭಟನೆ ಮಾಡುವ ಅವಕಾಶ ಕಳೆದುಕೊಳ್ಳುತ್ತಿದ್ದರು. ಯಾಕೆಂದರೆ ಅವರ ನೆಂಟರು ಸಿಕ್ಕಿ ಹಾಕಿಕೊಳ್ಳುತ್ತಾರೆ ನೋಡಿ ಎಂದು ವ್ಯಂಗ್ಯವಾಡಿದರು.
ಬಂಧಿತ ವ್ಯಕ್ತಿಯ ಹಿನ್ನೆಲೆ ತನಿಖೆ ಮಾಡಲು ಜಿಲ್ಲಾ ಎಸ್ಪಿ ಅವರಿಗೆ ಹೇಳಿದ್ದೇನೆ. ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.