ಕರ್ನಾಟಕ

karnataka

ETV Bharat / state

ಯುವತಿಯಿಂದ ಪಾಕ್​ ಪರ ಘೋಷಣೆ: ಸಚಿವ ಸಿ.ಟಿ.ರವಿ ಆಕ್ರೋಶ - ಸಿಟಿ ರವಿ ಲೆಟೆಸ್ಟ್ ನ್ಯೂಸ್

ಬೆಂಗಳೂರಿನಲ್ಲಿ ಸಿಎಎ ಹಾಗೂ ಎನ್ಆರ್​ಸಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CT Ravi
ಸಿಟಿ ರವಿ

By

Published : Feb 20, 2020, 11:32 PM IST

ಚಿಕ್ಕಮಗಳೂರು:ಬೆಂಗಳೂರಿನಲ್ಲಿ ಸಿಎಎ ಹಾಗೂ ಎನ್ಆರ್​ಸಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ

ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ. ಈ ಸಿಎಎಯಿಂದ ಭಾರತೀಯರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಇದನ್ನು ಪ್ರಧಾನಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಸಾರಿ ಸಾರಿ ಹೇಳಿದ್ದಾರೆ. ಇದು ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲ. ಇದರ ನೆಪದಲ್ಲಿ ದೇಶದಲ್ಲಿ ಅರಾಜಕತೆ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ ಎಂದರು.

ದೇಶದ್ರೋಹಿಗಳಿಗೆ ಯಾವುದೇ ರೀತಿಯ ಕ್ಷಮೆ ಇರಬಾರದು. ಇಂತಹ ದೇಶದ್ರೋಹಿಗಳ ಪರ ವಕಾಲತ್ತು ವಹಿಸೋರಿಗೂ ಕ್ಷಮೆ ಇರಬಾರದು. ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಕಾರ್ಯಕ್ರಮವನ್ನು ಸಂಘಟಿಸಿದವರ ಮೇಲೆಯೂ ಕೇಸ್ ದಾಖಲು ಮಾಡಬೇಕು. 19ನೇ ವಯಸ್ಸಿನಲ್ಲಿ ಅಮೂಲ್ಯಗೆ ಇಂಥ ಆಲೋಚನೆ ಬಂದಿದ್ದಾದರೂ ಹೇಗೆ? ಯಾವ ಸಂಘಟನೆಯಿಂದ ಬಂದಿದ್ದಾಳೆ ಅದರ ಬಗ್ಗೆಯೂ ಕೂಡ ತನಿಖೆಯಾಗಬೇಕು ಎಂದರು.

ನಾನು ಇದನ್ನು ಖಂಡಿಸುತ್ತೇನೆ. ಇಂತಹ ದೇಶದ್ರೋಹಿಗಳನ್ನು ಒಳಗಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸೋಣ. ಅಲ್ಲೇ ಬೇಕಾದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಿ. ಅಲ್ಲಿನ ನರಕದ ಪರಿಸ್ಥಿತಿಯನ್ನು ಅನುಭವಿಸಲಿ. ಇಂಥವರು ನರಕದಲ್ಲಿ ಬಿದ್ದು ಸಾಯಲಿ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ಆಗ್ರಹಿಸಿದರು.

ABOUT THE AUTHOR

...view details