ಚಿಕ್ಕಮಗಳೂರು:ಕಾಂಗ್ರೆಸ್ನವರು2018ರ ಚುನಾವಣೆಯಲ್ಲಿ ಜನತದಳವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದರು. ಆದರೆ, ಕಾಂಗ್ರಸ್, ಜೆಡಿಎಸ್ ನವರು ಒಟ್ಟಿಗೆ ಸೇರಿಕೊಂಡರು. ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಒಟ್ಟಗೆ ಸೇರಿ ಎಲೆಕ್ಷನ್ ಮಾಡಿದರು, ಯಾರು ಯಾವಾಗ ಹೇಗೆ ಆಡುತ್ತಾರೆ ಎಂದು ಹೇಳೋಕೆ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೊಟ್ಟಂತಹ ಮೆಜಾರಿಟಿಯನ್ನು ಕರ್ನಾಟಕದಲ್ಲಿ ಕೊಡಿ. ಸಣ್ಣ, ಪುಟ್ಟ ದೋಷಗಳು ದೂರು ಆಗುತ್ತೆ. ನಮಗೆ 2008 ರಲ್ಲೂ ಕ್ಲಿಯರ್ ಮೆಜಾರಿಟಿ ಬರಲಿಲ್ಲ, ಹಾಗಾಗಿ ಅವರನ್ನು ಸೇರಿಸಿಕೊಂಡು ಸರ್ಕಾರ ರಚಿಸಬೇಕಾಯಿತು. 2018 ರಲ್ಲೂ ಹೀಗೆ ಹಾಗಿತ್ತು. ಹಾಗಾಗಿ ಇಂತಹ ಪರಿಸ್ಥಿತಿ ಮತ್ತೆ ಬರಬಾರದು ಎಂದರೆ ರಾಜ್ಯದ ಜನ ಸ್ಪಷ್ಟ ಬಹುಮತವನ್ನು ನೀಡಬೇಕು ಎಂದರು. ಒಂದೇ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಿಸ ಬರಾದು. ಆಗ ರಾಜಕಾರಣ ಸ್ವಚ್ಛವಾಗುತ್ತೆ, ರಾಷ್ಟ್ರಭಕ್ತಿ ರಾಜಕಾರಣ ಬರುತ್ತೆ. ಕಾಂಗ್ರೆಸ್ನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಹಾಕಿ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಜೆಸಿಬಿ ಹಿಡಿದು ಲೂಟಿ ಹೊಡೆಯಲು ಕಾದು ಕೂತಿದ್ದಾರೆ:ನಾನು ಕೊಟ್ಟ ಅಕ್ಕಿಯನ್ನ ಕಡಿಮೆ ಮಾಡಿದರು, ಅವರ ಮನೆ ಹಾಳಾಗ್ ಹೋಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಕಾಂಗ್ರೆಸ್ನವರು ಜೆಸಿಬಿ ಹಿಡಿದು ಲೂಟಿ ಹೊಡೆಯಲು ಕಾದು ಕೂತಿದ್ದಾರೆ. ರಾಜಸ್ಥಾನ್, ಹಿಮಾಚಲ ಪ್ರದೇಶ, ಛತ್ತೀಸ್ ಗಢದಲ್ಲಿ ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂತು, ಅಧಿಕಾರಕ್ಕೆ ಬಂದ ಮೂರೇ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ 3-4 ರೂಪಾಯಿ ಜಾಸ್ತಿ ಮಾಡಿದರು. ನಿಜವಾಗಲೂ ಕಾಂಗ್ರೆಸ್ನ ನೀತಿಯಾಗಿದ್ದರೆ ಅವರು ಅಧಿಕಾರದಲ್ಲಿರುವ ರಾಜ್ಯದಲ್ಲಿ ಮೊದಲು ಕೊಟ್ಟು ತೋರಿಸಲಿ ಎಂದು ಸಾವಲು ಹಾಕಿದರು.