ಚಿಕ್ಕಮಗಳೂರು:ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಂಪೂರ್ಣ ಜಿಲ್ಲೆಯನ್ನು ಲಾಕ್ಡೌನ್ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸುಮಾರು 400 ಜನರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.
400 ಜನರಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಸಚಿವ ಸಿ.ಟಿ.ರವಿ - ಕೊವಿಡ್-19
ರಾಜ್ಯದಲ್ಲಿ ಕೋವಿಡ್-19 ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮನೆಯಿಂದ ಜನರು ಹೊರ ಬಾರದಂತೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸುಮಾರು 400 ಅಗತ್ಯ ಸಾಮಗ್ರಿಗಳ ಕಿಟ್ಗಳನ್ನು ಸಚಿವ ಸಿ.ಟಿ.ರವಿ ವಿತರಣೆ ಮಾಡಿದರು.
![400 ಜನರಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಸಚಿವ ಸಿ.ಟಿ.ರವಿ ct ravi distributed ration to poor family due to corona lock down](https://etvbharatimages.akamaized.net/etvbharat/prod-images/768-512-6735683-1010-6735683-1586513815752.jpg)
ಸಚಿವ ಸಿ. ಟಿ. ರವಿ
ನಗರಸಭಾ ಸದಸ್ಯ ಅಫ್ಸರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿ ನಗರದ ದೋಣಿಕಣ, ಹಿರೇಮಗಳೂರು, ಗವನಹಳ್ಳಿಯಲ್ಲಿ ಸುಮಾರು 400 ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.
400 ಜನರಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಸಚಿವ ಸಿ.ಟಿ.ರವಿ
ದಿನನಿತ್ಯದ ಪಡಿತರ ಕೊಳ್ಳಲು ಆಗದ ಬಡವರು, ನಿರ್ಗತಿಕರಿಗೆ ಈ ಸೇವೆಯನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ. ಲಾಕ್ಡೌನ್ ನಿಯಮ ಪಾಲಿಸಿ ಎಂದು ಸಚಿವ ಸಿ.ಟಿ.ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.