ಚಿಕ್ಕಮಗಳೂರು: ಕೊಡವ ಸಾಹಿತ್ಯದ ಚಂಗೋಲೆ ಪ್ರಾರಂಭಿಸಿದ ಯುವಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿ ಬೇಸಿಗೆಯಲ್ಲಿ ಕೊಡಗಿನಲ್ಲಿ ಹಾಕಿ ಉತ್ಸವ ನಡೆಯುತ್ತಿದ್ದು, ಅದರಲ್ಲೂ ಹಾಕಿ ಹಬ್ಬದಲ್ಲಿ ಸಾಹಿತ್ಯದ ಹಬ್ಬ ನಡೆಯುತ್ತದೆ.
ಕೊಡವ ಸಾಹಿತ್ಯ ಚಂಗೋಲೆ ಆರಂಭಿಸಿದ ಯುವಕರಿಗೆ ಸಿ.ಟಿ.ರವಿ ಅಭಿನಂದನೆ
ಕೊಡವ ಭಾಷೆ ಕನ್ನಡದ ಸಹೋದರ ಭಾಷೆ. ಅಪ್ಪಚ್ಚು ಕವಿಗಳು ಹಾಗೂ ಐಮಾ ಮುತ್ತಣ್ಣನವರು ಕೊಡವ ಭಾಷೆಯನ್ನು ಕನ್ನಡದಲ್ಲಿ ಬಳಸಿ ಕನ್ನಡಕ್ಕೆ ಹಿರಿಯಣ್ಣನ ಸ್ಥಾನ ಕೊಟ್ಟು ಕನ್ನಡದ ಪ್ರೀತಿ ಮೆರೆದಿದ್ದಾರೆ. ಈ ಹಿನ್ನೆಲೆ ಸಾಹಿತ್ಯ ಚಂಗೋಲೆಯಲ್ಲಿ ಸಿ.ಟಿ.ರವಿ, ಕವಿ ಅಪ್ಪಚ್ಚು ಅವರ ಕವನ ವಾಚಿಸಿ, ಕೊಡವ ಸಾಹಿತ್ಯದ ಚಂಗೋಲೆ ಪ್ರಾರಂಭಿಸಿದ ಯುವಕರಿಗೆ ಅಭಿನಂದನೆ ಸಲ್ಲಿಸಿದರು.
ಕೊಡವ ಸಾಹಿತ್ಯ ಚಂಗೋಲೆ ಆರಂಭಿಸಿದ ಯುವಕರಿಗೆ ಸಿ.ಟಿ ರವಿ ಅಭಿನಂದನೆ
ಕೊಡವ ಭಾಷೆ ಕನ್ನಡದ ಸಹೋದರ ಭಾಷೆ. ಅಪ್ಪಚ್ಚು ಕವಿಗಳು ಹಾಗೂ ಐಮಾ ಮುತ್ತಣ್ಣನವರು ಕೊಡವ ಭಾಷೆಯನ್ನು ಕನ್ನಡದಲ್ಲಿ ಬಳಸಿ ಕನ್ನಡಕ್ಕೆ ಹಿರಿಯಣ್ಣನ ಸ್ಥಾನ ಕೊಟ್ಟು ಕನ್ನಡದ ಪ್ರೀತಿ ಮೆರೆದಿದ್ದಾರೆ ಎಂದು ಈ ಸಾಹಿತ್ಯ ಚಂಗೋಲೆಯಲ್ಲಿ ಅಪ್ಪಚ್ಚು ಕವಿಯ ಕವನವನ್ನು ಸಿ.ಟಿ.ರವಿ ವಾಚಿಸಿದರು.
ಕನ್ನಡದ ಪ್ರೀತಿಯನ್ನು ಹಾಗೂ ಕೊಡವ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ಪ್ರಯತ್ನ ಮಾಡುತ್ತಿರುವವರಿಗೆ ಸಚಿವ ಸಿ.ಟಿ.ರವಿ ಅಭಿನಂದನೆ ಸಲ್ಲಿಸಿದರು.