ಚಿಕ್ಕಮಗಳೂರು: ಕಾಂಗ್ರೆಸ್‌ನ ಹಿರಿಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ 9ನೇ ತಾರೀಖು(ಉಪಚುನಾವಣೆ ಫಲಿತಾಂಶದ ದಿನ) ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ಖರ್ಗೆಯಂತವರಿಗೆ ಸಿಹಿ ಸುದ್ದಿಯೇ ಆಗಿರಬೇಕು ಎಂದು ಸಚಿವ ಸಿ.ಟಿ ರವಿ ಕಾಲೆಳೆದರು.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್‌ನ ಹಿರಿಯ ನಾಯಕರುಗಳಿಗೆ ಆಕ್ರೋಶ, ಅಸಮಾಧಾನ, ಅಸಹನೆ ಇತ್ತು. ಈಗ ಅದಕ್ಕೆ ಸ್ಪಂದನೆ ಸಿಕ್ಕಿದೆ. ಇದರಿಂದ ನಮಗೇನೂ ಆಗಬೇಕಾಗಿಲ್ಲ. ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿದ ಉಪ ಚುನಾವಣೆಯಲ್ಲಿ 12 ಶಾಸಕರು ಹಾಗು ಒಬ್ಬ ಬಂಡಾಯ ಶಾಸಕರನ್ನು ಜನರು ಬಿಜೆಪಿಗೆ ನೀಡಿದ್ದಾರೆ. ಒಟ್ಟು ಶೇ 50ರಷ್ಟು ಮತ ಪ್ರಮಾಣ ಬಿಜೆಪಿಗೆ ಸಿಕ್ಕಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಅಥವಾ ಅವರು ಅಧಿಕಾರದಲ್ಲಿ ಮುಂದುವರೆಯೋದ್ರಿಂದ ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮವಿಲ್ಲ ಎಂದರು.