ಚಿಕ್ಕಮಗಳೂರು:ಮಂಗಳವಾರ ರಾತ್ರಿ ಬೈಕ್ನಲ್ಲಿ ಮನೆಗೆ ಹೋಗುವಾಗ ಬೈಕ್ನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಯೋಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೈಕ್ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಸಿಆರ್ಪಿಎಫ್ ಯೋಧ ಸಾವು ಸಿಆರ್ಪಿಎಫ್ ಯೋಧ ಚಿದಾನಂದ್ (27) ಮೃತರು. ಕಡೂರು ತಾಲೂಕಿನ ಸಖರಾಯಪಟ್ಟಣದ ಹೊರ ವಲಯದಲ್ಲಿರುವ 173 ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಸಖರಾಯಪಟ್ಟಣದ ಬಾಳೇನಹಳ್ಳಿ ನಿವಾಸಿಯಾಗಿದ್ದಾರೆ.
ಮಂಗಳವಾರ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದ ಬಿದ್ದು ಯೋಧ ಮೃತಪಟ್ಟಿದ್ದಾರೆ. ಈ ಘಟನೆ ಯಾರಿಗೂ ತಿಳಿದಿರಲಿಲ್ಲ. ಆದರೇ ಚಿದಾನಂದ್ ಮನೆಯವರು ಅವರ ಮೊಬೈಲ್ಗೆ ಕರೆ ಮಾಡುತ್ತಲೇ ಇದ್ದರೂ ಫೋನ್ ರಿಂಗ್ ಆಗುತ್ತಿತ್ತು. ಆದರೇ ಫೋನ್ ಸ್ವೀಕರಿಸುತ್ತಿರಲಿಲ್ಲ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧನಾಗಿ ಸಿಆರ್ಪಿಎಫ್ ನಲ್ಲಿ ಚಿದಾನಂದ್ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಕಳೆಯಲು ಊರಿಗೆ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಮೃತ ದೇಹವನ್ನು ಚಿಕ್ಕಮಗಳೂರಿನ ಜಿಲ್ಲಾಸ್ವತ್ರೆಗೆ ರವಾನಿಸಲಾಗಿದೆ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.