ಕರ್ನಾಟಕ

karnataka

ETV Bharat / state

ರೈತರಿಗೆ ಕಂಟಕವಾದ ಅಕಾಲಿಕ ಮಳೆ: ಕಟಾವಿಗೆ ಬಂದ ಭತ್ತ, ಕಾಫಿ ಬೆಳೆ ನಾಶ - ರೈತರ ಬೆಳೆ ನಾಶ

ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ರೈತರ ಮೊಗದಲ್ಲಿ ನಗು ತರಿಸದೆ ತಲೆನೋವು ಉಂಟು ಮಾಡಿದೆ. ಕಟಾವಿಗೆ ಬಂದಿದ್ದ ಭತ್ತ, ಕಾಫಿ ಸೇರಿ ಹಲವು ಬೆಳೆಗಳು ಮಳೆಗೆ ಸಿಲುಕಿ ನಾಶವಾಗಿವೆ. ಇಡೀ ವರ್ಷದ ಬದುಕು ಕಟ್ಟಿಕೊಳ್ಳಬೇಕಾಗಿದ್ದ ರೈತ ವರ್ಗಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ.

crop-lose-in-chikkamagalore-from-unseasonal-rain
ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ನಾಶವಾಗಿರುವುದು

By

Published : Jan 9, 2021, 5:39 PM IST

ಚಿಕ್ಕಮಗಳೂರು: ಭತ್ತ, ಕಾಫಿ ಕೊಯ್ಲು ಮಾಡಿ ಸುಗ್ಗಿಯ ಸಂಭ್ರಮದಲ್ಲಿ ಭಾಗಿಯಾಗಬೇಕಿದ್ದ ರೈತರು ಬೆಳೆ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುವ ಸಂದರ್ಭ ಬಂದೊದಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಅಕಾಲಿಕೆ ಮಳೆ ಮತ್ತೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ 10 ತಿಂಗಳ ಹಿಂದೆ ಕಷ್ಟಪಟ್ಟು ನಾಟಿ ಮಾಡಿ ಬೆಳೆದಿದ್ದ ಭತ್ತ ಕಟಾವಿಗೆ ಬಂದಿತ್ತು. ರೈತ ಪ್ರತಿ ವರ್ಷದಂತೆ ಕೊಯ್ಲು ಮಾಡಿ ಇನ್ನೇನು ಭತ್ತ ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ರೈತರ ಬದುಕನ್ನು ಬೀದಿಗೆ ತಳ್ಳಿದೆ.

ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ನಾಶ

ಮೂಡಿಗೆರೆ ತಾಲೂಕಿನ ಫಲ್ಗುಣಿ, ಬಿನ್ನಡಿ, ಮಾಳಿಗನಾಡು, ಬಾಳೂರು, ಸಾರಗೋಡು ಸೇರಿದಂತೆ ಹತ್ತಾರು ಹಳ್ಳಿಗಳು ಬೆಳೆ ನಾಶಕ್ಕೆ ಸಾಕ್ಷಿಯಾಗಿವೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಜನವರಿ ತಿಂಗಳಲ್ಲಿ ಈ ರೀತಿಯ ಮಳೆ ಬರುಲಿದೆ ಅನ್ನೋದನ್ನು ಕನಸಿನಲ್ಲಿಯೂ ರೈತರು ಕಂಡಿರಲಿಲ್ಲ. ಆದರೆ ಇದೀಗ ತಾವು ಬೆಳೆದ ಬೆಳೆಗಳೇ ತಮ್ಮ ಕಣ್ಣೆದುರೇ ಅದೇ ಮಳೆಯಲ್ಲಿ ಕೊಚ್ಚಿ ಹೋಗ್ತಿರೋದನ್ನು ಕಂಡು ಕಣ್ಣೀರು ಹಾಕುವಂತಾಗಿದೆ.

ಭತ್ತ ಕೊಯ್ಲು ಮಾಡಿದ ಬಳಿಕ ಮಳೆ ಬಂದಿದ್ದರಿಂದ ಭತ್ತ ರಾಶಿ ಮಾಡುವುದು ಅಸಾಧ್ಯದ ಮಾತಾಗಿದೆ. ಗದ್ದೆಗಳಲ್ಲಿ ನೀರು ತುಂಬಿರುವುದರಿಂದ ಭತ್ತ ಅಲ್ಲಿಯೇ ಮೊಳಕೆ ಒಡೆಯುವ ಸಾಧ್ಯತೆ ಇರಲಿದೆ. ಇದಲ್ಲದೆ ನೀರಿನಲ್ಲಿ ಕೊಳೆಯುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ ಕಾಫಿಗೂ ಈ ಮಳೆಯಿಂದ ಹಾನಿಯಾಗಿದ್ದು, ಮಳೆಯಿಂದ ಕೊಳೆಯುವ ಭೀತಿ ಎದುರಾಗಿದೆ. ಅಲ್ಲದೆ ಗಿಡದಲ್ಲಿರುವ ಕಾಫಿಯೂ ಮಳೆಯಿಂದ ನೆಲಕ್ಕುರುಳಲಿವೆ.

ಇದನ್ನೂ ಓದಿ:ಕಾಡಾನೆ ಹಾವಳಿಗೆ ಕಂಗಾಲಾದ ಕಾಫಿ ಬೆಳೆಗಾರರು

ABOUT THE AUTHOR

...view details