ಕರ್ನಾಟಕ

karnataka

ETV Bharat / state

Chikkamagaluru crime: ಎರಡನೇ ಹೆಂಡತಿ ಕಡೆ ಗಂಡನಿಗೆ ಹೆಚ್ಚಿನ ಒಲವು: ಸವತಿಯನ್ನು ಕೊಂದು ಪೊಲೀಸರಿಗೆ ಶರಣಾದ ಮೊದಲ ಪತ್ನಿ - ಪತಿಯೇ ಪರದೈವ

ಕಡೂರು ತಾಲೂಕಿನ ಸಗನಿ ಬಸವನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ಸವತಿಯನ್ನು ಹತ್ಯೆ ಮಾಡಿ, ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

Etv Bharat
Etv Bharat

By

Published : Jul 8, 2023, 7:43 AM IST

Updated : Jul 8, 2023, 8:17 AM IST

ಚಿಕ್ಕಮಗಳೂರು : ಮೊದಲ ಹೆಂಡತಿ ಇರುವಾಗಲೇ ಎದುರು ಮನೆಯ ಮತ್ತೋರ್ವ ಮಹಿಳೆಯೊಂದಿಗೆ ಪ್ರೀತಿಯಾಗಿ, ಅವಳನ್ನು ವರಿಸಿದ್ದ ವ್ಯಕ್ತಿ ತಾನು ಇಬ್ಬರ ಹೆಂಡಿರ ಮುದ್ದಿನ ಗಂಡ ಅಂದುಕೊಂಡಿದ್ದ. ಆದ್ರೆ ಅದೇ ಅವನ ಕುಟುಂಬಕ್ಕೆ ಮುಳುವಾಗಿ ಪರಿಣಮಿಸಿದೆ. ಇಬ್ಬರ ಪತ್ನಿಯರ ಮಧ್ಯೆ ವೈಷಮ್ಯ ಬೆಳೆದು ಆ ವ್ಯಕ್ತಿಯ ಮನೆಯಲ್ಲಿ ಹೆಣ ಉರುಳಿದೆ.

ಹೌದು, ಯಾವುದೇ ಮಹಿಳೆ ಕಟ್ಟಿಕೊಂಡ ಗಂಡ ತನಗೆ ಸ್ವಂತ, ಪತಿಯೇ ಪರದೈವ ಅಂತಾ ತಿಳಿದು ಬದುಕು ಸಾಗಿಸುತ್ತಾರೆ. ಇದ್ದಕ್ಕಿದ್ದಂತೆ ಸಂಸಾರದಲ್ಲಿ ಮತ್ತೊಬ್ಬ ಮಹಿಳೆ ತನ್ನ ಸವತಿ ಆಗಿ ಬಂದ್ರೆ ಆ ನೋವನ್ನು ತಡೆದುಕೊಳ್ಳಲು ಮೊದಲ ಪತ್ನಿ ಸಹಿಸಿಕೊಳ್ಳುವುದು ಅಸಾಧ್ಯ. ಅಂತೆಯೇ ಅನ್ಯೋನ್ಯವಾಗಿದ್ದ ತನ್ನ ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಸವತಿ ಆಗಿ ಬಂದಿದ್ದಕ್ಕೆ ಕೆರಳಿದ ಮೊದಲ ಪತ್ನಿ ಆಕೆಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಸಗನಿ ಬಸವನಹಳ್ಳಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಭಾರತಿ (20) ಕೊಲೆಯಾದ ಮಹಿಳೆ.

ಕಡೂರು ತಾಲೂಕಿನ ಮಂಜುನಾಥ ಎಂಬುವರು ಹೆಂಡತಿ ಕಾಂತಾ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ಸಗನಿ ಬಸವನಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಮಂಜುನಾಥ್​ಗೆ ಎದುರು ಮನೆಯ ಭಾರತಿ ಎಂಬುವರ ಜೊತೆ ಸಂಬಂಧ ಬೆಳೆದು ಅವಳನ್ನೂ ಸಹ ಮದುವೆಯಾಗಿ, ಇಬ್ಬರು ಹೆಂಡಿರ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಮಂಜುನಾಥ್​, ಎರಡನೇ ಹೆಂಡತಿ ಭಾರತಿ ಕಡೆ ಹೆಚ್ಚು ಒಲವು ತೋರುತ್ತಿರುವುದು ಮೊದಲ ಹೆಂಡತಿ ಕಾಂತಾಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಮಂಜುನಾಥ್​ ಮತ್ತು ಕಾಂತಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಸಂಬಂಧ ಕಾಂತಾ, ಭಾರತಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಳು. ಶುಕ್ರವಾರದಂದು ಮನೆಯಲ್ಲಿದ್ದ ಕಾಂತಾ, ಭಾರತಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ಕೊಲೆ ಮಾಡಿ ಬೆಳಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.

ಇದನ್ನೂ ಓದಿ :ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ರೌಡಿಶೀಟರ್​ ಕೊಲೆ : ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರ ಸಾವು

ಪಿಎಸ್‍ಐ ಪಿ. ಕಿರಣ್ ಕುಮಾರ್ ಮತ್ತು ಸಿಬ್ಬಂದಿ ಹತ್ಯೆಯಾದ ಭಾರತಿ ಶವವಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಈ ನಡುವೆ ಮೃತ ಭಾರತಿ ಸಂಬಂಧಿಕರು ಕಾಂತ ಒಬ್ಬಳೇ ಕೊಲೆ ಮಾಡಿಲ್ಲ, ಆಕೆಯ ಜೊತೆ ಇನ್ನೂ ಆರೇಳು ಜನ ಸೇರಿದ್ದಾರೆ ಎಂದು ದೂರಿದ್ದಾರೆ.

ಇದನ್ನೂ ಓದಿ :ಮಾರಕಾಸ್ತ್ರಗಳಿಂದ ಕೊಚ್ಚಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ.. ಆ ಮರ್ಡರ್​ ಬಗ್ಗೆ ಡಿಸಿಪಿ ಹೇಳಿದ್ದು ಹೀಗೆ!

ಭಾರತಿ ತಾಯಿ ರಂಗಮ್ಮ ಅವರು ಒಟ್ಟು 09 ಜನರ ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ಶರಣಾಗಿರುವ ಆರೋಪಿ ಕಾಂತ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Last Updated : Jul 8, 2023, 8:17 AM IST

ABOUT THE AUTHOR

...view details